ಶಾಪಿಂಗ್‌ ಮಾಡುವಾಗ ಹಣ ಉಳಿಸಿಲು ಇಲ್ಲಿವೆ ಸಿಂಪಲ್‌ ಟಿಪ್ಸ್‌

Pic Credit: pinterest

By Malashree anchan

05 July 2025

ಶಾಪಿಂಗ್‌

ಶಾಪಿಂಗ್‌ಗೆ ಹೋದಾಗ ದುಂದುವೆಚ್ಚ ಆಗೋದು ಕೂಡ ಸಹಜ. ಹೀಗೆ ಹೊರಗಡೆ ಶಾಪಿಂಗ್‌ ಹೋದಾಗ ಅತಿಯಾದ ಖರ್ಚು ಆಗ್ಬಾರ್ದು ಎಂದಾದ್ರೆ ಈ ಒಂದಷ್ಟು ಸಲಹೆಗಳನ್ನು ಪಾಲಿಸಿ.

ಪಟ್ಟಿ ಮಾಡಿ

ಶಾಪಿಂಗ್‌ಗೆ ಹೋಗುವ ಮೊದಲು ನೀವು ಖರೀದಿಸಬೇಕಾದ ವಸ್ತುಗಳನ್ನು ಪಟ್ಟಿಯಲ್ಲಿ ಬರೆಯಿರಿ. ಇದು ಅನಗತ್ಯ ವಸ್ತುಗಳನ್ನು ಖರೀದಿ ಮಾಡುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ನಗದು ಹಣ

ಕ್ರೆಡಿಟ್‌ ಕಾರ್ಡ್‌, ಡಿಜಿಟಲ್‌ ಪಾವತಿ ಮಾಡಿದ್ರೆ  ಜಾಸ್ತಿ ಹಣ ಖರ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಬಜೆಟ್‌ಗೆ ಸೀಮಿತವಾಗುವಷ್ಟು ಮಾತ್ರ ನಗದು ಹಣವನ್ನು ಒಯ್ಯಿರಿ.

ಯೋಚಿಸಿ ಖರೀದಿಸಿ

ಅಗತ್ಯ ವಸ್ತುಗಳನ್ನು ಮಾತ್ರವಲ್ಲದೆ, ಇಷ್ಟವಾಗುವ ಅನಗತ್ಯ ವಸ್ತುಗಳನ್ನು ಕೊಳ್ಳುವುದರಿಂದ ಖರ್ಚು ಹೆಚ್ಚುಆಗುತ್ತದೆ. ಹಾಗಾಗಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಿ.

ಆಫರ್‌ಗಳ ಆಮೀಷ

ಕಡಿಮೆ ಬೆಲೆಗೆ ಸಿಗುತ್ತೆ ಎನ್ನುವ ಕಾರಣಕ್ಕೆ, ಆಫರ್‌ಗಳ ಆಮೀಷಕ್ಕೆ ಒಳಗಾಗಿ ಅನಗತ್ಯ  ವಸ್ತುಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ಹಣವೂ ವ್ಯರ್ಥವಾಗುತ್ತದೆ.

ಬೆಲೆ ಹೋಲಿಕೆ

ವಸ್ತುಗಳ ಬೆಲೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಪರಿಶೀಲಿಸಿ. ಮತ್ತು ಆ ವಸ್ತುವಿನ ಬೆಲೆ ಕಮ್ಮಿಯಿರುವಲ್ಲಿ ಕೊಳ್ಳಿರಿ. ಇದರಿಂದ ದುಂದುವೆಚ್ಚ ತಪ್ಪಿಸಬಹುದು.  

ಬಜೆಟ್‌ ನಿಗದಿ ಪಡಿಸಿ

ಬೇಕಾಬಿಟ್ಟಿ ಶಾಪಿಂಗ್‌ ಮಾಡಿದ್ರೆ  ಹಣ ವ್ಯರ್ಥವಾಗುತ್ತದೆ. ಹಾಗಾಗಿ ಪ್ರತಿ ಖರೀದಿಗೂ ಒಂದು ನಿರ್ದಿಷ್ಟ ಬಜೆಟ್‌ ನಿಗದಿ ಪಡಿಸಿ.

ಸ್ಮಾರ್ಟ್ ಶಾಪಿಂಗ್

ಬುದ್ಧಿವಂತಿಕೆಯಿಂದ ಶಾಪಿಂಗ್‌ ಮಾಡಿ. ಆತುರದಿಂದ ಏನನ್ನೂ ಖರೀದಿಸಬಾರದು. ವಸ್ತುಗಳನ್ನು ಖರೀದಿಸುವಾಗ ಜಾಗರೂಕರಾಗಿದ್ದರೆ, ಬಹಳಷ್ಟು ಹಣವನ್ನು ಉಳಿಸಬಹುದು.