18 Nov 2025

Pic credit - Pintrest

Author: Akshay Pallamjalu 

ಜೀವನದಲ್ಲಿ ಖುಷಿ ಬೇಕಂದ್ರೆ ಈ ಟಿಪ್ಸ್‌ ಫಾಲೋ ಮಾಡಿ

ನಿಮ್ಮ ದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರಾರಂಭಿಸಿ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ನಕಾರಾತ್ಮಕತೆಯನ್ನು ನಿಮ್ಮಿಂದ ದೂರವಿಡಲು ಸಹಾಯ ಮಾಡುತ್ತದೆ.  

ಸಕಾರಾತ್ಮಕ ಆಲೋಚನೆ

Pic credit - Pintrest

ನಿಮಗಾಗಿ, ನಿಮ್ಮ ಸ್ವ ಆರೈಕೆಗಾಗಿ ಪ್ರತಿನಿತ್ಯ  ಸ್ವಲ್ಪ ಸಮಯವನ್ನು ಮೀಸಲಿಡಿ, ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.

ನಿಮಗಾಗಿ ಸಮಯ ಕೊಡಿ

Pic credit - Pintrest

ಸಣ್ಣಪುಟ್ಟ ವಿಷಯಗಳಿಗೂ ಕೃತಜ್ಞತೆ ವ್ಯಕ್ತಪಡಿಸುವುದರಿಂದ ನಿಮ್ಮ ಸಂತೋಷ ಹೆಚ್ಚಾಗುತ್ತದೆ. ಇದು ನಿಮ್ಮ ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ. ಜೀವನವೂ ಸಕಾರಾತ್ಮಕವಾಗಿರುತ್ತದೆ.

ಕೃತಜ್ಞತಾ ಭಾವನೆ

Pic credit - Pintrest

ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಎಂಡಾರ್ಫಿನ್‌ ಎಂಬ ಸಂತೋಷದ ಹಾರ್ಮೋನು ಬಿಡುಗಡೆಯಾಗುತ್ತದೆ, ಇದು ನಿಮಗೆ ಸಂತೋಷವಾಗಿರಲು ಸಹಾಯ ಮಾಡುತ್ತದೆ.

ವ್ಯಾಯಾಮ ಮಾಡಿ

Pic credit - Pintrest

ಮೊಬೈಲ್ ಪರದೆಗೆ ಅಂಟಿಕೊಂಡಿರುವುದರಿಂದ ಮನಸ್ಸು ಆಯಾಸಗೊಳ್ಳುತ್ತದೆ. ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಮನಸ್ಸನ್ನು ಉಲ್ಲಾಗೊಳಿಸಲು ಇವುಗಳಿಂದ ದೂರವಿರಿ.  

ಡಿಜಿಟಲ್‌ ಡಿಟಾಕ್ಸ್‌

Pic credit - Pintrest

ಪ್ರತಿನಿತ್ಯ ಧ್ಯಾನ ಮಾಡುವುದರಿಂದ ಮನಸ್ಸು ಶಾಂತ ಮತ್ತು ಸ್ಪಷ್ಟವಾಗಿರುತ್ತದೆ. ಇದರಿಂದ ನೀವು ಸಂತೋಷವಾಗಿಯೂ ಇರಬಹುದು. ಅದಕ್ಕಾಗಿ 10 ನಿಮಿಷಗಳ ಕಾಲ ಧ್ಯಾನ ಮಾಡಿ.

ಧ್ಯಾನ ಮಾಡಿ

Pic credit - Pintrest

ನಿಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ ಮಾಡಿ. ಇದು ನಿಮ್ಮ ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ. ಮತ್ತು ನಿಮ್ಮ ಸಂತೋಷವೂ ಹೆಚ್ಚುತ್ತದೆ.

ಸಹಾಯ ಮಾಡುವುದು

Pic credit - Pintrest

ಜೀವನದಲ್ಲಿ ನೀವು ಖುಷಿಯಾಗಿರಬೇಕೆಂದರೆ, ಮೊದಲು ನೀವು ನಿಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡುವುದನ್ನು ಬಿಡಿ ಮತ್ತು ನಿಮ್ಮ ಜೀವನವನ್ನು ಆನಂದಿಸಲು ಕಲಿಯಿರಿ.

ಹೋಲಿಕೆ ಮಾಡದಿರಿ

Pic credit - Pintrest