20 Nov 2025

Pic credit - Pintrest

Author: Akshay Pallamjalu 

ಕಿಚನ್‌ ಸಿಂಕ್‌ ಕ್ಲೀನ್‌ ಮಾಡಲು ಈ ಟಿಪ್ಸ್‌ ಸಲಹೆಯನ್ನು ಅನುಸರಿಸಿ

ಅಡುಗೆ ಮನೆಯ ಸಿಂಕ್‌ ಡ್ರೈನನ್ನು ಎಷ್ಟೇ ಸ್ವಚ್ಛಗೊಳಿಸಿದರೂ ಸಹ ಕೆಟ್ಟ ವಾಸನೆ ಬರೋದು ನಿಲ್ಲುತ್ತಿಲ್ಲ ಎನ್ನುವವರು ಸಿಂಕ್‌ ಕ್ಲೀನಿಂಗ್‌ಗೆ ಈ ಮನೆಮದ್ದುಗಳನ್ನು ಬಳಸಬಹುದು.

ಅಡುಗೆ ಮನೆ ಸಿಂಕ್‌

Pic credit - Pintrest

ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ, ಅದರ ಮೇಲೆ ಉಪ್ಪನ್ನು ಸುರಿದು ಇದರಿಂದ ಸಿಂಕನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಕಲೆಗಳನ್ನು ಮತ್ತು ವಾಸನೆಯನ್ನು ಸುಲಭವಾಗಿ ತೆಗೆದುಹಾಕುತ್ತದೆ.

ನಿಂಬೆ, ಉಪ್ಪು

Pic credit - Pintrest

ವಾರಕ್ಕೊಮ್ಮೆಯಾದರೂ ಸಿಂಕ್‌  ಡ್ರೈನ್‌ಗೆ ಕುದಿಯುವ ನೀರನ್ನು ಸುರಿಯಿರಿ. ಈ ವಿಧಾನವು ಸಿಂಕ್ ಮತ್ತು ಡ್ರೈನ್ ಎರಡನ್ನೂ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ಬಿಸಿನೀರು

Pic credit - Pintrest

ವಿನೆಗರ್‌ ಜೊತೆ ಅರ್ಧ ಕಪ್ ಅಡಿಗೆ ಸೋಡಾವನ್ನು ಸಿಂಕ್‌ಗೆ ಹಾಕಿ. 10-15 ನಿಮಿಷಗಳ ನಂತರ, ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಸಿಂಕ್‌ ವಾಸನೆಯನ್ನು ಹೋಗಲಾಡಿಸುತ್ತದೆ.

ಅಡುಗೆ ಸೋಡಾ

Pic credit - Pintrest

ಅರ್ಧ ಕಪ್ ಉಪ್ಪಿನೊಂದಿಗೆ ಕೆಲವು ಐಸ್ ಕ್ಯೂಬ್‌ಗಳನ್ನು ಬೆರೆಸಿ ಚರಂಡಿಗೆ ಸುರಿಯಿರಿ. ನಂತರ ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಇದು ಸಿಂಕ್‌ ವಾಸನೆಯನ್ನು ಹೋಗಲಾಡಿಸುತ್ತದೆ.

ಐಸ್ ಮತ್ತು ಉಪ್ಪು

Pic credit - Pintrest

ಐಸ್ ಕ್ಯೂಬ್‌ಗಳು ಮತ್ತು ನಿಂಬೆ ಸಿಪ್ಪೆಗಳನ್ನು ಸಿಂಕ್‌ನಲ್ಲಿ ಹಾಕಿ. ಚೆನ್ನಾಗಿ ತೊಳೆಯಿರಿ ಈ ಹ್ಯಾಕ್‌ ಸಿಂಕ್‌ನಿಂದ ಪದೇ ಪದೇ ಬರುವ ವಾಸನೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ.

ಐಸ್‌ ಕ್ಯೂಬ್‌, ನಿಂಬೆ

Pic credit - Pintrest

ಬೆಚ್ಚಗಿನ ನೀರಿನೊಂದಿಗೆ ಉಪ್ಪನ್ನು ಬೆರೆಸಿ ಈ ದ್ರಾವಣವನ್ನು ಸಿಂಕ್‌ಗೆ ಸುರಿದು ಸ್ವಚ್ಛಗೊಳಿಸಿ. ಇದು ಸಿಂಕ್‌ನಿಂದ ಬರುವ ವಾಸನೆಯನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.

ಉಪ್ಪು

Pic credit - Pintrest

ನಿಯಮಿತವಾಗಿ ಸಿಂಕ್ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ  ವಾಸನೆ ನಿವಾರಣೆಯಾಗುವುದಲ್ಲದೆ, ಅಡುಗೆ ಮನೆ ಪರಿಸರವು ಸ್ವಚ್ಛವಾಗಿ ತಾಜಾವಾಗಿ ಇರುತ್ತದೆ.

ಶುಚಿಗೊಳಿಸುವಿಕೆ

Pic credit - Pintrest