ಪಾತ್ರೆಗಳಿಂದ ಬರುವ ಕೆಟ್ಟ ವಾಸನೆಯನ್ನು ತೆಗೆದು ಹಾಕುವುದು ಹೇಗೆ?
ಅರ್ಧ ನಿಂಬೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ ಪಾತ್ರೆಯನ್ನು ಚೆನ್ನಾಗಿ ತಿಕ್ಕಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಸೋಪಿನಿಂದ ಕ್ಲೀನ್ ಮಾಡಿ.
ನಿಂಬೆ, ಉಪ್ಪು
Pic credit - Pintrest
ದುರ್ವಾಸನೆ ಬರುವ ಪಾತ್ರೆಗೆ ದಾಲ್ಚಿನ್ನಿ ಪುಡಿ ಮತ್ತು ಸ್ವಲ್ಪ ನೀರು ಸೇರಿಸಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಲಿಕ್ವಿಡ್‌ನಿಂದ ಪಾತ್ರೆ ಕ್ಲೀನ್ ಮಾಡಿ.
ದಾಲ್ಚಿನ್ನಿ ಪುಡಿ
Pic credit - Pintrest
ಒಂದು ತುಂಡು ಆಲೂಗಡ್ಡೆಗೆ ಉಪ್ಪನ್ನು ಸೇರಿಸಿ, ಪಾತ್ರೆಯನ್ನು ಚೆನ್ನಾಗಿ ತಿಕ್ಕಿ, 10 ನಿಮಿಷಗಳ ಬಳಿಕ ಪಾತ್ರೆಯನ್ನು ಕ್ಲೀನ್ ಮಾಡದರೆ ಸುಲಭವಅಗಿ ವಾಸನೆ ಹೋಗಲಾಡಿಸಬಹುದು.
ಆಲೂಗಡ್ಡೆ
Pic credit - Pintrest
ಪಾತ್ರೆ ಕೆಟ್ಟ ವಾಸನೆ ಬರುತ್ತಿದ್ದರೆ, ಆ ಪಾತ್ರೆಗೆ ಕಾಫಿ ಡಿಕಾಕ್ಷನ್ ಮತ್ತು ಸ್ವಲ್ಪ ನೀರು ಸೇರಿಸಿ, 2 ನಿಮಿಷಗಳ ಕಾಲ ಕುದಿಸಿ ಸ್ವವ್ ಆಫ್ ಮಾಡಿ 20 ನಿಮಿಷಗಳ ಬಳಿಕ ಸೋಪ್‌ನಿಂದ ತೊಳೆಯಿರಿ.
ಕಾಫಿ ಪುಡಿ
Pic credit - Pintrest
ಮೊದಲು ಪಾತ್ರೆಯನ್ನು ತೊಳೆದು ನಂತರ ಪಾತ್ರೆಯ ಮೇಲೆ ಸ್ವಲ್ಪ ವಿನೆಗರ್ ಸಿಂಪಡಿಸಿ, ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದು ಪಾತ್ರೆಗಳಿಂದ ವಾಸನೆಯನ್ನು ತೆಗೆದುಹಾಕುತ್ತದೆ.
ವಿನೆಗರ್
Pic credit - Pintrest
ವಾಸನೆಯುಕ್ತ ಪಾತ್ರೆಯನ್ನು ಸ್ವಲ್ಪ ಕಡಲೆಹಿಟ್ಟು ಉದುರಿಸಿ, ಪಾತ್ರೆಯನ್ನು ಬೆಚ್ಚಗಿನಿ ನೀರಿನಲ್ಲಿ ತೊಳೆಯಿರಿ. ಇದು ವಾಸನೆಯನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಕಡಲೆ ಹಿಟ್ಟು
Pic credit - Pintrest
ವಾಸನೆ ಇರುವ ಪಾತ್ರೆಗೆ ವಿನೆಗರ್ ಮತ್ತು ಬೇಕಿಂಗ್ ಸೋಡಾ ಮಿಶ್ರಣವನ್ನು ಹಾಕಿ ಚೆನ್ನಾಗಿ ತೊಳೆಯಿರಿ. ಇದು ಪಾತ್ರೆಯ ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ.
ಬೇಕಿಂಗ್ ಸೋಡಾ
Pic credit - Pintrest
ನಿಂಬೆ ಸಿಪ್ಪೆಯನ್ನು ವಾಸನೆಯುಳ್ಳು ಪಾತ್ರೆಯಲ್ಲಿ ಹಾಕಿ, ಸ್ವಲ್ಪ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ, ಬಳಿಕ ಸೋಪ್‌ನಿಂದ ತೊಳೆಯಿರಿ. ಇದು ವಾಸನೆಯನ್ನು ಹೋಗಲಾಡಿಸುತ್ತದೆ.