Pic Credit: pinterest
By Malashree anchan
12 September 2025
ದಿನಕ್ಕೆ ಎರಡು ಬಾರಿ ಉತ್ತಮ ಗುಣಮಟ್ಟದ ಫೇಶ್ ವಾಶ್‌ನಿಂದ ನಿಮ್ಮ ಮುಖವನ್ನು ತೊಳೆಯಿರಿ ಮತ್ತು ಮುಖ ತೊಳೆದ ಬಳಿಕ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.
ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಿರಿ. ಸಾಕಷ್ಟು ನಿದ್ರೆ ಮಾಡುವುದರಿಂದ ಮುಖ ತಾಜಾ ಮತ್ತು ಕಾಂತಿಯುತವಾಗಿ ಕಾಣುತ್ತದೆ.
ತ್ವಚೆಯ ಸೌಂದರ್ಯವನ್ನು ಕಾಪಾಡಲು ಒಳಗಿನಿಂದ ಪೋಷಣೆ ನೀಡುವುದು ಮುಖ್ಯ. ಇದಕ್ಕಾಗಿ ಹಸಿರು ತರಕಾರಿ, ಹಣ್ಣುಗಳಂತಹ ಆರೋಗ್ಯಕರ ಆಹಾರವನ್ನು ಸೇವಿಸಿ.
ನೀರು ಕುಡಿಯುವುದು ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದೇ ರೀತಿ ನಿಮ್ಮ ಮುಖ ಕಾಂತಿಯುತವಾಗಿ ಕಾಣಲು ಪ್ರತಿನಿತ್ಯ 8-10 ಗ್ಲಾಸ್ ನೀರು ಕುಡಿಯಲು ಮರೆಯದಿರಿ.
ಚರ್ಮವನ್ನು ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸಲು ಸನ್‌ಸ್ಕ್ರೀನ್ ಹಚ್ಚಲೇಬೇಕು. ಇದು ಮೇಕಪ್ ಇಲ್ಲದಿದ್ದರೂ ನಿಮ್ಮ ತ್ವಚೆಯನ್ನು ಸುಂದರವಾಗಿ ಕಾಣುವಂಥೆ ಮಾಡುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡಿ. ವ್ಯಾಯಾಮ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ನೀವು ಪಾರ್ಲರ್‌ಗೆ ಹೋಗದಿದ್ದರೂ, ಮನೆಯಲ್ಲಿಯೇ ತ್ವಚೆಗೆ ಮಾಯಿಶ್ಚರೈಸರ್, ಸ್ಕ್ರಬ್ಬಿಂಗ್ ಟೋನಿಂಗ್ ಮಾಡುವುದು ಮತ್ತು ಆರೋಗ್ಯಕರ ರೀತಿಯಲ್ಲಿ ತ್ವಚೆಯ ಆರೈಕೆ ಮಾಡಿ
ಸೌಂದರ್ಯ ಮೇಕಪ್‌ನಿಂದ ಮಾತ್ರವಲ್ಲ, ನಿಮ್ಮ ಆತ್ಮವಿಶ್ವಾಸ ಮತ್ತು ನಗುವಿನಿಂದಲೂ ಪ್ರತಿಫಲಿಸುತ್ತದೆ. ಹಾಗಾಗಿ ಸದಾ ನಗುಮೊದಿಂದಿರಿ.