ಕೋಪ ಕಮ್ಮಿ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

Pic Credit: pinterest

By Malashree Anchan

27 May 2025

ಅಪಾಯಕಾರಿ

ಕೋಪ ಎನ್ನುವಂತಹದ್ದು ಎಷ್ಟು ಅಪಾಯಕಾರಿ ಎಂದ್ರೆ ಅದು ಒಂದು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ.

ಕೋಪ

ಕೋಪ ಎನ್ನುವಂತಹದ್ದು ಎಷ್ಟು ಅಪಾಯಕಾರಿ ಎಂದ್ರೆ ಅದು ಒಂದು ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ.

ಆಳವಾದ ಉಸಿರು

ಮೂಗಿನ ಮೂಲಕ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ, ನಿಧಾನಕ್ಕೆ ಉಸಿರನ್ನು ಬಿಡಿ. ಹೀಗೆ ಮಾಡುವುದರಿಂದ ಮೆದುಳಿಗೆ ಆಮ್ಲಜನಕ ದೊರೆಯುತ್ತದೆ ಇದು ಕೋಪ ಕಮ್ಮಿ  ಮಾಡುತ್ತೆ.

ತಣ್ಣೀರು ಕುಡಿಯಿರಿ

ಕೋಪ ಬಂದಾಗ ಒಂದು ಲೋಟ ತಣ್ಣೀರು ಕುಡಿಯಿರಿ. ತಣ್ಣೀರು ದೇಹದ ಉಷ್ಣತೆ ಮತ್ತು ಮನಸ್ಸನ್ನು ತಂಪಾಗಿಸುತ್ತದೆ ಜೊತೆಗೆ ಕೋಪವನ್ನು ತಣ್ಣಗಾಗಿಸುತ್ತದೆ.

ಮೌನವಾಗಿರಿ

ಕೋಪದಲ್ಲಿ ತಪ್ಪು ತಪ್ಪು ಮಾತನಾಡುವುದಕ್ಕಿಂತ ತುಂಬಾ ಕೋಪಗೊಂಡಾಗ ಮೌನವಾಗಿರುವುದು ಉತ್ತಮ.

ಸ್ಥಳ ಬದಲಾಯಿಸಿ 

ನೀವು ತುಂಬಾ ಕೋಪಗೊಂಡಿದ್ದರೆ, ಮೊದಲು ಆ ಸ್ಥಳದಿಂದ ಎದ್ದು ಹೋಗಿ. ಇದರಿಂದ ಮನಸ್ಸು ಶಾಂತವಾಗುತ್ತದೆ. ಈ ಮೂಲಕ ನಿಮ್ಮ ಕೋಪ ತಣ್ಣಗಾಗುತ್ತದೆ.

ಮೊಬೈಲ್‌ ನೋಡಿ

ಕೋಪವನ್ನು ಶಮನಗೊಳಿಸಲು ಮೊಬೈಲ್‌ನಲ್ಲಿ ತಮಾಷೆಯ ವಿಡಿಯೋಗಳನ್ನು ನೋಡಿ. ಇದು ಕೋಪವನ್ನು ಕಡಿಮೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ.

ಸಂಗೀತವನ್ನು ಆಲಿಸಿ

ಕೋಪವನ್ನು ನಿಯಂತ್ರಿಸಲು ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಿ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.