ಒಳ ಉಡುಪು ಒಣಗಿಸಲು ಈ ಟ್ರಿಕ್ಸ್‌ ಫಾಲೋ ಮಾಡಿ

Pic Credit: pinterest

By Malashree Anchan

29 May 2025

ಬಟ್ಟೆ ಒಣಗುವುದಿಲ್ಲ

ಮಳೆಗಾಲದಲ್ಲಿ‌ ಸೂರ್ಯನ ಬೆಳಕು ಸರಿಯಾಗಿ ಬೀಳುವುದಿಲ್ಲ, ಇದರಿಂದಾಗಿ ಒಗೆದ ಬಟ್ಟೆಗಳು ಒಣಗಲು ಸಿಕ್ಕಾಪಟ್ಟೆ ಸಮಯ ತೆಗೆದುಕೊಳ್ಳುತ್ತದೆ.

ಒಳ ಉಡುಪು

ಅದರಲ್ಲೂ ಒಳ ಉಡುಪುಗಳನ್ನು ಒಣಗಿಸುವುದೇ ದೊಡ್ಡ ಟಾಸ್ಕ್‌ ಆಗಿರುತ್ತೆ. ಕೆಲವೊಂದು ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಇವುಗಳನ್ನು ಸುಲಭವಾಗಿ ಒಣಗಿಸಬಹುದು.

ಸೋಂಕು

ಒದ್ದೆ ಒಳಉಡುಪುಗಳನ್ನು ಧರಿಸುವುದರಿಂದ ತುರಿಕೆ, ಕಡಿತ, ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರಿಯಾಗಿ ಒಣಗಿದ ಒಳಉಡುಪು ಧರಿಸುವುದು ಅವಶ್ಯಕ.

ವಾಷಿಂಗ್‌ ಮೆಷಿನ್‌ ಡ್ರೈಯರ್‌

ಒಗೆದ ಒಳ ಉಡುಪನ್ನು ವಾಷಿಂಗ್‌ ಮೆಷಿನ್‌ ಡ್ರೈಯರ್‌ನಲ್ಲಿ ಬಾರಿ ಡ್ರೈ ಮಾಡಿ. ಹೀಗೆ ಮಾಡುವುದರಿಂದ ಬಟ್ಟೆಗಳಲ್ಲಿ ನೀರಿನಾಂಶ ಉಳಿಯುವುದಿಲ್ಲ ಮತ್ತು ಬಟ್ಟೆ ಬೇಗ ಒಣಗುತ್ತದೆ.

ಫ್ಯಾನ್

ಒಗೆದ ಒಳ ಉಡುಪುಗಳನ್ನು ಸೀಲಿಂಗ್‌ ಫ್ಯಾನ್‌ ಅಥವಾ ಟೆಬಲ್‌ ಫ್ಯಾನ್‌ ಅಡಿಯಲ್ಲಿ ಒಣಗಲು ಬಿಡಿ. ಇದರ ಸಹಾಯದಿಂದ ಬಟ್ಟೆ ಬೇಗ ಒಣಗುತ್ತದೆ.

ಹೇರ್ ಡ್ರೈಯರ್

ನೀವು ಈ ಮಳೆಗಾಲದಲ್ಲಿ ಹೇರ್‌ ಡ್ರೈಯರ್‌ ಸಹಾಯದಿಂದಲೂ ಒಳ ಉಡುಪನ್ನು ಒಣಗಿಸಬಹುದು. ಇದರ ಬಿಸಿ ಗಾಳಿಯ ಸಹಾಯದಿಂದ ಬಟ್ಟೆ ಬೇಗನೆ ಒಣಗುತ್ತವೆ.

ಇಸ್ತ್ರಿ

ಮಳೆಗಾಲದಲ್ಲಿ ಒಳ ಉಡುಪುಗಳನ್ನು ಒಣಗಿಸಲು ಇನ್ನೊಂದು ಅತ್ಯಂತ ಸುಲಭದ ಹಾಗೂ ಪರಿಣಾಮಕಾರಿ ಮಾರ್ಗವೆಂದರೆ ಇಸ್ತ್ರಿ ಮಾಡುವುದು.

ಮೈಕ್ರೋವೇವ್ ಓವನ್

ಒಗೆದ ಒಳ ಉಡುಪನ್ನು ಬೇಕಿಂಗ್ ಶೀಟ್ ಮೇಲೆ ಇರಿಸಿ ಅದನ್ನು ಸ್ವಲ್ಪ ಹೊತ್ತು ಮೈಕ್ರೋವೇವ್‌ ಓವನ್‌ನಲ್ಲಿ ಬಿಸಿ ಮಾಡುವ ಮೂಲಕವೂ ಒಣಗಿಸಬಹುದು.