Pic Credit: pinterest
By Malashree Anchan
18 june 2025
ರಾಮಾಯಣ ಹಿಂದೂಗಳ ಪವಿತ್ರ ಗ್ರಂಥ. ರಾಮಾಯಣದ ಈ ಕೆಲವೊಂದು ನೀತಿ ಪಾಠಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸಿನತ್ತ ಸಾಗಿ.
ರಾಮ ತನ್ನ ತಂದೆಯ ಮಾತನ್ನು ಪೂರೈಸಲು ಅರಮನೆ ಬಿಟ್ಟು ಕಾಡಿಗೆ ಹೋದನು. ಹೀಗೆ ನೀವು ಕೂಡಾ ನಿಮ್ಮ ಕರ್ತವ್ಯಕ್ಕೆ ಗೌರವ, ಆದ್ಯತೆಯನ್ನು ನೀಡಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ.
ಸತ್ಯದ ದಾರಿಯಲ್ಲಿ ಬದುಕುವುದರಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಮತ್ತು ಜೀವನದಲ್ಲಿ ಗೌರವ ಮತ್ತು ಶಾಂತಿ ಸಿಗುತ್ತದೆ ಎಂದು ರಾಮಾಯಣ ತೋರಿಸುತ್ತದೆ.
ದುರಹಂಕಾರದಿಂದ ರಾವಣನ ಪತನವಾಯಿತು. ಹಾಗೆಯೇ ಯಶಸ್ಸಿಗಾಗಿ ಅಡ್ಡದಾರಿ ಹಿಡಿಯಬಾರದು, ಇದು ಶಾಶ್ವತವಲ್ಲ ಎಂಬುದನ್ನು ರಾಮಾಯಣದಿಂದ ಕಲಿಯಬಹುದು.
ರಾಮಾಯಣದ ಮೂಲಕ ನೀವು ಸಂಬಂಧ, ನಂಬಿಕೆಯ ಪಾಠವನ್ನು ಕಲಿಯಬಹುದು. ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು.
ಮಿತಿ ಮತ್ತು ಶಿಸ್ತಿನೊಳಗೆ ಇದ್ದರೆ ನಾವು ಒಳ್ಳೆಯ ವ್ಯಕ್ತಿಯಾಗಬಹುದು ಎಂಬುದನ್ನು ರಾಮಾಯಣದಿಂದ ಕಲಿಯಬಹುದು.
ಶ್ರೀರಾಮನು ತನ್ನ ಪ್ರತಿಯೊಂದು ಜವಾಬ್ದಾರಿಗಳನ್ನು ಪ್ರೀತಿ ಮತ್ತು ಕರುಣೆಯಿಂದ ಪೂರೈಸಿದನು. ಹೀಗೆ ನೀವು ಕೂಡ ಜೀವನದಲ್ಲಿ ಪ್ರೀತಿ, ದಯಾಗುಣವನ್ನು ಬೆಳೆಸಿಕೊಳ್ಳಬೇಕು.
ಒಟ್ಟಾರೆಯಾಗಿ ರಾಮಾಯಣ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ. ಈ ಮೂಲಕ ನಾವು ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಡೆಸಬಹುದು.