Pic Credit: pinterest
By Malashree anchan
12 August 2025
ಸಂಬಂಧ ಬಿಗಿಯಾಗಿರಬೇಕೆಂದರೆ ಗಂಡ ಹೆಂಡತಿ ನಡುವೆ ಪ್ರೀತಿ, ಕಾಳಜಿಯಂತಹ ಭಾವನಾತ್ಮಕ ಬಾಂಧವ್ಯ ಖಂಡಿತವಾಗಿ ಇರಲೇಬೇಕು.
ಗಂಡ ಹೆಂಡತಿ ಪರಸ್ಪರ ಸಣ್ಣಪುಟ್ಟ ವಿಷಯಗಳಿಗೂ ಹೊಗಳಿಕೆಯ ಮಾತುಗಳನ್ನಾಡಬೇಕು. ಹೀಗೆ ಮಾಡುವುದರಿಂದ ದಂಪತಿಯ ನಡುವಿನ ಬಾಂಧವ್ಯ ಬಲಗೊಳ್ಳುತ್ತದೆ.
ಸಣ್ಣಪುಟ್ಟ ಜಗಳಗಳಿಗೂ ಮಾತು ಬಿಟ್ಟು ಕೂರಬಾರದು. ದಂಪತಿಗಳ ನಡುವೆ ಸಂವಹನ ಉತ್ತಮವಾಗಿರಬೇಕು. ಆಗ ಸಂಬಂಧವೂ ಗಟ್ಟಿಯಾಗಿರುತ್ತದೆ.
ಗಂಡನ ಆಸೆಗಳಿಗೆ ಹೆಂಡತಿ, ಪತ್ನಿಯ ಆಸೆಗಳಿಗೆ ಪತಿ ಬೆಂಬಲ ನೀಡುವಂತಹದ್ದು ಮಾಡುತ್ತಿರಬೇಕು. ಈ ರೀತಿಯ ಸಕಾರಾತ್ಮಕ ವಿಷಯಗಳು ದಾಂಪತ್ಯವನ್ನು ಬಲಪಡಿಸುತ್ತದೆ.
ಎಷ್ಟೇ ಬ್ಯುಸಿಯಾಗಿದ್ದರೂ, ಆ ಕೆಲಸದ ನಡುವೆಯೂ ಸಂಗಾತಿಗಾಗಿ ಒಂದಿಷ್ಟು ಸಮಯವನ್ನು ಮೀಸಲಿಡಿ. ಹೀಗೆ ಸಂಗಾತಿಗೆ ಅಮೂಲ್ಯ ಸಮಯ ನೀಡುವುದರಿಂದ ಬಂಧ ಗಟ್ಟಿಯಾಗುತ್ತದೆ.
ಯಾವುದೇ ಸಂಬಂಧದಲ್ಲಿ ನಂಬಿಕೆ ಎನ್ನುವಂತಹದ್ದು ಬಹಳ ಮುಖ್ಯ. ಗಂಡ ಹೆಂಡತಿಯ ನಡುವೆ ನಂಬಿಕೆ ಗಟ್ಟಿಯಾಗಿರಬೇಕು. ಹೀಗಿದ್ದರೆ ಸಂಬಂಧ ಎನ್ನುವಂತದ್ದು ಬಲಗೊಳ್ಳುತ್ತದೆ.
ಪತಿ ಪತ್ನಿಯರ ನಡುವೆ ಯಾವುದೇ ರೀತಿಯ ಮುಚ್ಚು ಮರೆ ಇರಬಾರದು. ಏನಾದರೂ ಸುಳ್ಳು ಹೇಳಿದರೆ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ.
ದೈಹಿಕ ಅನ್ಯೋನ್ಯತೆ ಎಂದರೆ ಕೇವಲ ದೈಹಿಕ ಸಂಪರ್ಕವಲ್ಲ. ಸಂಗಾತಿಯ ಕೈಯನ್ನು ಪ್ರೀತಿಯಿಂದ ಹಿಡಿದುಕೊಳ್ಳುವುದು, ಮುದ್ದಿಸುವುದು ಇವೆಲ್ಲ ಸಂಬಂಧವನ್ನು ಬಲಪಡಿಸುತ್ತದೆ.