ನೈಸರ್ಗಿಕವಾಗಿ ಮುಖದ ಹೊಳಪು ಹೆಚ್ಚಾಗಬೇಕೆಂದರೆ ಹೀಗೆ ಮಾಡಿ

Pic Credit: pinterest

By Malashree anchan

26 August 2025 

ತಣ್ಣೀರಿನಿಂದ ಮುಖ ತೊಳೆಯಿರಿ

ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ರಿಫ್ರೆಶ್‌ ಮಾಡಲು ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇದು ಚರ್ಮವನ್ನು ಬಿಗಿಗೊಳಿಸುತ್ತದೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ.

ಅಲೋವೆರಾ ಜೆಲ್‌ ಹಚ್ಚಿ

ಮುಖ ತೊಳೆದ ನಂತರ ತಾಜಾ ಅಲೋವೆರಾ ಜೆಲ್ ಹಚ್ಚಿ. ಇದು ಚರ್ಮವನ್ನು ತೇವಗೊಳಿಸುತ್ತದೆ. ಇದಲ್ಲದೆ ರೋಸ್‌ ವಾಟರ್‌ ಕೂಡ ಮುಖಕ್ಕೆ ಸಿಂಪಡಿಸಬಹುದು.

ಸೀರಮ್‌ ಹಚ್ಚಿ

ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಬೆಳಿಗ್ಗೆ ಉತ್ತಮ ಸೀರಮ್ ಬಳಸಿ. ಸೀರಮ್ ಚರ್ಮವನ್ನು ತೇವಗೊಳಿಸುವುದಲ್ಲದೆ, ವಯಸ್ಸಾಗುವಿಕೆಯನ್ನು ತಡೆಯುತ್ತದೆ.

ಸನ್‌ಸ್ಕ್ರೀನ್‌ ಹಚ್ಚಿ

ಇದು ಬೆಳಗಿನ ದಿನಚರಿಯ ಪ್ರಮುಖ ಹಂತವಾಗಿದ್ದು, ನೀವು SPF 30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಮುಖಕ್ಕೆ ಹಚ್ಚಬೇಕು.

ಉಗುರುಬೆಚ್ಚಗಿನ ನೀರು ಕುಡಿಯಿರಿ

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಹಿಂಡಿ ಕುಡಿಯಿರಿ. ಇದು ಚರ್ಮವನ್ನು ಒಳಗಿನಿಂದ ಸ್ವಚ್ಛಗೊಳಿಸಲು, ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.  

ಲಘು ವ್ಯಾಯಾಮ ಮಾಡಿ

ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಕಾಲ ವಾಕಿಂಗ್‌, ಸ್ಟ್ರೆಚಿಂಗ್‌ ಅಥವಾ ಸೂರ್ಯ ನಮಸ್ಕಾರ ಮಾಡಿ, ಇದು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಕಾರಿ.

ಧ್ಯಾನ ಮಾಡಿ

ಒತ್ತಡದಿಂ ತ್ವಚೆ ಸುಕ್ಕುಗಟ್ಟಿದಂತಾಗುತ್ತದೆ. ಹಾಗಾಗಿ ಮಾನಸಿಕ ಶಾಂತಿಗಾಗಿ ಪ್ರತಿನಿತ್ಯ ಬೆಳಗ್ಗೆ 10 ರಿಂದ 15 ನಿಮಿಷಗಳ ಕಾಲ ಧ್ಯಾನ ಮಾಡಿ. ಇದು ತ್ವಚೆ, ಮನಸ್ಸು ಎರಡಕ್ಕೂ ಪ್ರಯೋಜನಕಾರಿ.

ಆರೋಗ್ಯಕರ ಆಹಾರ ಸೇವಿಸಿ

ತ್ವಚೆಯ ಹೊಳಪನ್ನು ಹೆಚ್ಚಿಸಲು ದೇಹಕ್ಕೆ ಒಳಗಿನಿಂದ ಪೋಷಣೆ ನೀಡುವುದು ಕೂಡ ತುಂಬಾ ಮುಖ್ಯ. ಅದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಆಹಾರಗಳನ್ನೇ ಸೇವಿಸಿ.