Pic Credit: pinterest
By Malashree Anchan
23 june 2025
ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಪದೇ ಪದೇ ಜೇಡ ಬಲೆ ಕಟ್ಟಿ ಬಿಡುತ್ತವೆ. ಹೀಗಿರುವಾಗ ಕೆಲವು ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕರ್ಪೂರ, ನೀಲಗಿರಿ, ತುಳಸಿ, ಲ್ಯಾವೆಂಡರ್‌ನಂತಹ ತೈಲವನ್ನು ಸ್ವಲ್ಪ ನೀರಿಗೆ ಸೇರಿಸಿ ಮನೆ ಮೂಲೆ, ಕಿಟಕಿ, ಬಾಗಿಲುಗಳ ಮೇಲೆ ಸಿಂಪಡಿಸಿದರೆ ಜೇಡರ ಬಲೆ ಸಮಸ್ಯೆ ಬರೋಲ್ಲ.
ಜೇಡರ ಬಲೆಯನ್ನು ನಿರ್ಮೂಲನೆ ಮಾಡಲು ವಿನೆಗರ್ ಕೂಡ ಪರಿಣಾಮಕಾರಿಯಾಗಿದೆ. ನೀರು ಮತ್ತು ವಿನೆಗರನ್ನು ಸಮ ಪ್ರಮಾಣದಲ್ಲಿ ಬೆರೆಸಿ, ಜೇಡಗಳು ಕಂಡು ಬರುವ ಸ್ಥಳಕ್ಕೆ ಸಿಂಪಡಿಸಿ.
ಜೇಡಗಳು ಬೆಳ್ಳುಳ್ಳಿಯ ಕಟು ವಾಸನೆಯಿಂದ ದೂರವಿರುತ್ತವೆ. ಆದ್ದರಿಂದ ಜೇಡ ಬರುವ ಜಾಗದಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಇಡಿ.
ಪುದೀನ ಎಲೆಗಳ ಸಹಾಯದಿಂದ ನೀವು ಜೇಡರ ಬಲೆಯನ್ನು ಹೋಗಲಾಡಿಸಬಹುದು. ಪುದೀನಾ ಸೊಪ್ಪಿನ ನೀರನ್ನು ಸ್ಪ್ರೇ ಮಾಡುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.
ನಿಂಬೆ, ಕಿತ್ತಳೆಯಂತಹ ಹಣ್ಣುಗಳ ಸಿಪ್ಪೆಯನ್ನು ನೀರಿನೊಂದಿಗೆ ಬೆರೆಸಿ, ಜೇಡಗಳು ಬಲೆ ಕಟ್ಟುವ ಸ್ಥಳಕ್ಕೆ ಸಿಂಪಡಿಸಿ, ಇದರ ಸಹಾಯದಿಂದಲೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಬೇಕಿಂಗ್ ಸೋಡಾ ಮತ್ತು ವಿನೆಗರನ್ನು ಮಿಕ್ಸ್ ಮಾಡಿ, ಈ ದ್ರಾವಣವನ್ನು ಜೇಡ ಬಲೆ ಕಟ್ಟುವ ಸ್ಥಳಕ್ಕೆ ಸಿಂಪಡಿಸುವ ಮೂಲಕವೂ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮುಖ್ಯವಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ಜೇಡ, ಕೀಟಗಳಂತಹ ಸಮಸ್ಯೆಗಳು ಪದೇ ಪದೇ ಕಾಣಿಸಿಕೊಳ್ಲುತ್ತವೆ.