ಚಿನ್ನ ಖರೀದಿಸಿಲು ಒಳ್ಳೆ ದಿನ ಯಾವುದು?

Pic Credit: pinterest

By Malashree Anchan

23 june 2025

ಚಿನ್ನ

ಶುಭದ ಸಂಕೇತವಾಗಿರುವ ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಭಾರತೀಯ ನಾರಿಮಣಿಯರಿಗಂತೂ ಚಿನ್ನ ಎಂದ್ರೆ ಪಂಚಪ್ರಾಣ.

ಶುಭದ ಸಂಕೇತ

ಬಂಗಾರ ಶುಭದ ಸಂಕೇತವಾಗಿರುವುದರಿಂದ ಅಕ್ಷಯ ತೃತೀಯ, ದೀಪಾವಳಿ ಸೇರಿದಂತೆ ಹಬ್ಬಗಳ ಸಮಯದಲ್ಲಿ ಜನ ಚಿನ್ನವನ್ನು ಖರೀದಿ ಮಾಡುತ್ತಾರೆ.

ಚಿನ್ನ ಖರೀದಿ

ಹಬ್ಬದ ಸಂದರ್ಭದಲ್ಲಿ ಹೆಚ್ಚಿನವರು ಚಿನ್ನ ಖರೀದಿ ಮಾಡ್ತಾರೆ. ಆದರೆ ಬಹುತೇಕರಿಗೆ ವಾರದ ಯಾವ ದಿನ ಬಂಗಾರವನ್ನು ಕೊಂಡರೆ ಒಳ್ಳೆಯದು ಎಂದು ಗೊತ್ತಿಲ್ಲ.

ಶುಭ ಸಮಯ

ಮದುವೆ, ಗೃಹ ಪ್ರವೇಶ ಇತ್ಯಾದಿ ಶುಭ ಸಮಾರಂಭಗಳಿಗೆ ಸರಿಯಾದ ಸಮಯ, ಘಳಿಗೆಯನ್ನು ಆಯ್ಕೆ ಮಾಡುವಂತೆ, ಚಿನ್ನವನ್ನು ಸರಿಯಾದ ಸಮಯದಲ್ಲಿ ಖರೀದಿಸುವುದು ಬಹಳ ಮುಖ್ಯ.

ಉತ್ತಮ ದಿನ

ಶಾಸ್ತ್ರಗಳ ಪ್ರಕಾರ ಚಿನ್ನ ಖರೀದಿಸಲು ಶ್ರೇಷ್ಠವಾದ ದಿನವೆಂದರೆ ಅದು ಗುರುವಾರ ಹಾಗೂ ಭಾನುವಾರ

ಶುಭ

ಚಿನ್ನ ಸೂರ್ಯ, ಗುರು ಗ್ರಹಕ್ಕೆ ಸಂಬಂಧಿಸಿರುವುದರಿಂದ ಈ ದಿನಗಳಲ್ಲಿ ಖರೀದಿಸಿದ ಚಿನ್ನವು ಜಾತಕದಲ್ಲಿ ಗುರು ಮತ್ತು ಸೂರ್ಯನ ಸ್ಥಾನವನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ.

ಪುಷ್ಯ ನಕ್ಷತ್ರ

ಇದಲ್ಲದೆ ಪುಷ್ಯ ನಕ್ಷತ್ರ ಯಾವ ದಿನ ಬರುತ್ತದೆಯೋ ಆ ದಿನ ಚಿನ್ನ ಖರೀದಿಸಿದರೂ ಒಳ್ಳೆಯದು ಎಂದು ಹೇಳಲಾಗುತ್ತದೆ.

ಈ ದಿನ ಬೇಡ

ಚಿನ್ನ ಸೂರ್ಯನ ಸಂಕೇತವಾಗಿದ್ದು, ಶನಿ ಮತ್ತು ಸೂರ್ಯ ದ್ವೇಷ ಭಾವನೆಯನ್ನು ಹೊಂದಿದ್ದಾರೆ. ಹಾಗಾಗಿ ಶನಿವಾರದಂದು ಚಿನ್ನ ಖರೀದಿ ಮಾಡಬಾರದು.