ಮನುಷ್ಯ ಅಲ್ವೇ ಅಲ್ಲ, ಈ ಜೀವಿಗಳೇ ಪ್ರೀತಿಯಲ್ಲಿ ನಿಷ್ಠವಾಗಿರೋದು

Pic Credit: pinterest

By Malashree Anchan

13 june 2025

ನಿಷ್ಠಾವಂತ ಜೀವಿಗಳು

ಮನುಷ್ಯರಲ್ಲಿ ಪ್ರೀತಿಗೆ ಬೆಲೆಯೇ ಇಲ್ಲದಂತಾಗಿದೆ. ಆದ್ರೆ ಕೆಲವೊಂದಿಷ್ಟು ಜೀವಿಗಳು ತಮ್ಮ ಪ್ರೀತಿ ಹಾಗೂ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತಂತೆ.

ಹಂಸಗಳು

ಹಂಸ ಜೋಡಿಗಳನ್ನು ಪ್ರೀತಿಯ ನಿಜವಾದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇವುಗಳು ಒಂದೇ ಸಂಗಾತಿಯೊಂದಿಗೆ ಜೀವನ ಸಾಗಿಸುತ್ತವೆ.

ಗಿಬ್ಬನ್ಸ್

ಮಂಗನ ಜಾತಿಗೆ ಸೇರಿದ ಈ ಪ್ರಾಣಿಗಳು ಸಹ ಸಂಗಾತಿಗೆ ತುಂಬಾ ನಿಷ್ಠವಾಗಿರುತ್ತವೆ. ಇವು ತಮ್ಮ ಸಂಗಾತಿ ಸತ್ತರೆ ಜೀವನಪರ್ಯಂತ ಒಂಟಿಯಾಗಿಯೇ ಬದುಕು ಸಾಗಿಸುತ್ತವೆ.

ತೋಳಗಳು

ತೋಳಗಳು ಅಪಾಯಕಾರಿಯಾಗಿ ಕಾಣುತ್ತವೆ, ಆದರೆ ಇವು ಪ್ರೀತಿಯ ವಿಚಾರದಲ್ಲಿ ತುಂಬಾನೇ ಸೌಮ್ಯವಾಗಿರುತ್ತವೆ. ಇವು  ತಮ್ಮ ಕುಟುಂಬ ಮತ್ತು ಸಂಗಾತಿಗೆ ಬಹಳ ನಿಷ್ಠವಾಗಿರುತ್ತವೆ.

ಬೋಳು ಹದ್ದು

ಬೋಳು ಹದ್ದುಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತವೆ. ಒಮ್ಮೆ ಅವು ಸಂಗಾತಿಯನ್ನು ಆರಿಸಿಕೊಂಡರೆ, ಅವು ಜೀವನಪರ್ಯಂತ ಅದರ ಜೊತೆಗೆಯೇ  ಜೀವಿಸುತ್ತವೆ.

ಪೆಂಗ್ವಿನ್‌

ಪೆಂಗ್ವಿನ್‌ಗಳು ತಮ್ಮ ಸಂಗಾತಿಗೆ ತುಂಬಾ ನಿಷ್ಠವಾಗಿರುತ್ತವೆ. ಇವುಗಳು ತಮ್ಮ ಜೀವನದುದ್ದಕ್ಕೂ ಒಂದೇ ಸಂಗಾತಿಯೊಂದಿಗೆ ಇರುತ್ತವೆ.

ಬೀವರ್‌ಗಳು

ಈ ಪುಟ್ಟ ಪ್ರಾಣಿ ಪ್ರೀತಿ, ಸಂಬಂಧದ ವಿಚಾರದಲ್ಲಿ ತುಂಬಾನೇ ನಿಷ್ಠವಾಗಿರುತ್ತವೆ. ಅವುಗಳು ತಮ್ಮ ಇಡೀ ಜೀವನವನ್ನು  ಸಂಗಾತಿಯೊಂದಿಗೆ ಕಳೆಯುತ್ತವೆ.

ಫ್ರೆಂಚ್ ಏಂಜೆಲ್ ಫಿಶ್

ಫ್ರೆಂಚ್ ಏಂಜೆಲ್‌ಫಿಶ್‌ ಹೆಸರಿನ ಮೀನುಗಳು ಕೂಡಾ ತಮ್ಮ ಪ್ರೀತಿಗೆ ತುಂಬಾನೇ ನಿಷ್ಠವಾಗಿರುತ್ತವೆ. ಇವುಗಳು ಜೀವನಪರ್ಯಂತ ಒಂದೇ ಸಂಗಾತಿಯೊಂದಿಗೆ ಇರುತ್ತವೆ.