ರಕ್ತ ದಾನಕ್ಕೂ ಮುನ್ನ ಈ ಆಹಾರಗಳನ್ನು ಸೇವಿಸಬೇಕಂತೆ

Pic Credit: pinterest

03 July 2025

ರಕ್ತದಾನ

ಲಕ್ಷಾಂತರ ಜನ ರಕ್ತದಾನ ಮಾಡುವಂತಹ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಹಾಗಿದ್ರೆ ರಕ್ತದಾನ ಮಾಡುವ ಮೊದಲು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಯಿರಿ.

ಬೀಟ್ರೂಟ್

ಬೀಟ್ರೂಟ್‌ ನೈಟ್ರೇಟ್‌ ಮತ್ತು ಕಬ್ಬಿಣಾಂಶಗಳಿಂದ ಹೇರಳವಾಗಿದೆ. ಇವು ಹಿಮೋಗ್ಲೋಬಿನ್‌ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಇದು ರಕ್ತವನ್ನು ಆರೋಗ್ಯಕರವಾಗಿಸುತ್ತದೆ.

ಮೊಟ್ಟೆ

ಇದು ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ರಕ್ತದಾನ ಮಾಡಿದ ನಂತರ ಬರುವ ಆಯಾಸ ಆಲಸ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಾಲಕ್‌ ಸೊಪ್ಪು

ಇದು ಹಿಮೋಗ್ಲೋಬಿನ್‌ ಮಟ್ಟವನ್ನು ಹೆಚ್ಚಿಸಲು ಸಹಕಾರಿ. ಅದಕ್ಕಾಗಿಯೇ ರಕ್ತದಾನ ಮಾಡುವ ಒಂದು ಅಥವಾ ಎರಡು ದಿನಕ್ಕೆ ಮೊದಲು ಪಾಲಕ್‌ ಸೊಪ್ಪನ್ನು ಸೇವನೆ ಮಾಡುವುದು ಉತ್ತಮ.

ಕಿತ್ತಳೆ ಹಣ್ಣು

ಇದು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಇವು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತಪರಿಚಲನೆಯನ್ನು ಕಾಪಾಡಿಕೊಳ್ಳಲು ಸಹಕಾರಿ.

ಬಾದಾಮಿ

ಬಾದಾಮಿಯಲ್ಲಿ ಪ್ರೋಟೀನ್‌ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಇದು ರಕ್ತದಾನ ಮಾಡಿದ ನಂತರ ಉಂಟಾಗುವ ಆಯಾಸವನ್ನು ತಡೆಯುತ್ತವೆ.

ಮಟನ್‌

ಇದು ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಅದಕ್ಕಾಗಿಯೇ ರಕ್ತದಾನ ಮಾಡುವ ಮೊದಲು ಮಟನ್‌ ತಿನ್ನುವುದು ತುಂಬಾ ಒಳ್ಳೆಯದು.

ನೀರು ಕುಡಿಯಿರಿ

ರಕ್ತದಾನ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ರಕ್ತದೊತ್ತಡದ ಮಟ್ಟ ಕಡಿಮೆಯಾಗಬಹುದು. ಇದರಿಂದ ತಲೆ ತಿರುಗಿದಂತಾಗಬಹುದು. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ.