27 Nov 2025

Pic credit - Pintrest

Author: Akshay Pallamjalu 

ಒತ್ತಡದಿಂದ ಮುಕ್ತಿ ಪಡೆಯಲು ಬೆಳಗಿನ ದಿನಚರಿ ಹೀಗಿರಲಿ

ಬೆಳಗ್ಗೆ ಬೇಗ ಏಳುವುದರಿಂದ ಮನಸ್ಸು ಶಾಂತವಾಗುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಬೆಳಗ್ಗೆ ಬೇಗ ಎದ್ದೇಳಿ

Pic credit - Pintrest

ಬೆಳಗ್ಗೆ ಎದ್ದ ತಕ್ಷಣ 5 ನಿಮಿಷಗಳ ಕಾಲ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದು ಆಮ್ಲಜನಕ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ನರಮಂಡಲವನ್ನು ತಂಪಾಗಿಸುತ್ತದೆ.

ಆಳವಾದ ಉಸಿರಾಟ

Pic credit - Pintrest

ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಮತ್ತು ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ಮಾನಸಿಕ ಶಾಂತಿಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡಲು  ಸಹಾಯ ಮಾಡುತ್ತದೆ.

ಧ್ಯಾನ, ಯೋಗ

Pic credit - Pintrest

ಬೆಳಗ್ಗೆ ಲಘು ವ್ಯಾಯಾಮ ಮಾಡಿ. ಇದು ನಿಮ್ಮ ಹಾರ್ಮೋನು ಸಮತೋಲನಗೊಳಿಸಲು, ಕಾರ್ಟಿಸೋಲ್‌ ಅನ್ನು ಕಡಿಮೆ ಮಾಡಿ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಲಘು ವ್ಯಾಯಾಮ

Pic credit - Pintrest

ಬೆಳಗ್ಗೆ ನಿಮ್ಮ ನೆಚ್ಚಿನ ಸಂಗೀತವನ್ನು ಆಲಿಸಿ. ಇದು ಎಂಡಾರ್ಫಿನ್‌ ಎಂಬ ಸಂತೋಷದ ಹಾರ್ಮೋನು ಬಿಡುಗಡೆ ಮಾಡುತ್ತದೆ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಂಗೀತ ಕೇಳಿ

Pic credit - Pintrest

ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಈ ಜಲಸಂಚಯನವು ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ನೀರು ಕುಡಿಯಿರಿ

Pic credit - Pintrest

ಬೆಳಗಿನ ಉಪಾಹಾರವು ದಿನವಿಡೀ ನಿಮ್ಮ ಮೆದುಳಿಗೆ ಶಕ್ತಿ ನೀಡುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.  ಆದ್ದರಿಂದ, ನಿಮ್ಮ ಉಪಾಹಾರದಲ್ಲಿ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಿ.  

ಆರೋಗ್ಯಕರ ಉಪಹಾರ

Pic credit - Pintrest

ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಸಮಯ ಕಳೆಯಿರಿ. ಇದು  ವಿಟಮಿನ್‌ ಡಿ ಪಡೆಯಲು, ಮನಸ್ಥಿತಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸೂರ್ಯನ ಬೆಳಕು

Pic credit - Pintrest