27 Nov 2025

Pic credit - Pintrest

Author: Akshay Pallamjalu 

ಇರುವೆಗಳ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ನೀರು, ಬಿಳಿ ವಿನೆಗರ್ ಮತ್ತು ನಿಂಬೆ ರಸವನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ ಸಿಂಪಡಿಸಿ. ಇವುಗಳ ಬಲವಾದ ವಾಸನೆ ಇರುವೆಗಳು ಮನೆಯೊಳಗೆ ಪ್ರವೇಶಿಸದಂತೆ ತಡೆಯುತ್ತದೆ.

ನಿಂಬೆ, ವಿನೆಗರ್

Pic credit - Pintrest

ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ 2 ಚಮಚ ಉಪ್ಪು ಸೇರಿಸಿ ಕರಗಿಸಿ.ಈ ದ್ರಾವಣವನ್ನು ಇರುವೆ ಓಡಾಡುವ ಸ್ಥಳದಲ್ಲಿ ಸಿಂಪಡಿಸಿ. ಕೆಲವೇ ನಿಮಿಷಗಳಲ್ಲಿ ಇರುವೆಗಳು ಓಡಿ ಹೋಗುತ್ತವೆ.

ಉಪ್ಪಿನ ದ್ರಾವಣ

Pic credit - Pintrest

ದಾಲ್ಚಿನ್ನಿಯ ಬಲವಾದ ಪರಿಮಳವು ಇರುವೆಗಳನ್ನು ಹಿಮ್ಮೆಟ್ಟಿಸಲು ಉತ್ತಮ ಮಾರ್ಗವಾಗಿದೆ. ಹಾಗಾಗಿ ಇರುವೆಗಳು ಓಡಾಡುವ ಸ್ಥಳದಲ್ಲಿ ದಾಲ್ಚಿನ್ನಿ ಪುಡಿಯನ್ನು ಹಾಕಿ.

ದಾಲ್ಚಿನ್ನಿ ಪುಡಿ

Pic credit - Pintrest

ಇರುವೆಗಳು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಲವಂಗವನ್ನೂ ಇಡಬಹುದು. ಈ ತಂತ್ರ ಇರುವೆಗಳನ್ನು ಪರಿಣಾಮಕಾರಿಯಾಗಿ ಓಡಿಸಲು ಸಹಕಾರಿಯಾಗಿದೆ.

ಲವಂಗ

Pic credit - Pintrest

ಸ್ವಲ್ಪ ನೀರಿಗೆ 10 ಹನಿ ಪುದೀನಾ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಮನೆಯ ಮೂಲೆಗಳು ಮತ್ತು ಇರುವೆಗಳು ಓಡಾಡುವ  ಸ್ಥಳಗಳಲ್ಲಿ ಸಿಂಪಡಿಸಿ.

ಪುದೀನಾ ಎಣ್ಣೆ

Pic credit - Pintrest

ಈರುಳ್ಳಿಯ ಬಲವಾದ ವಾಸನೆಯನ್ನು ಇರುವೆಗಳು ಇಷ್ಟಪಡುವುದಿಲ್ಲ. ಹಾಗಾಗಿ  ಇರುವೆಗಳು ಓಡಾಡುವ ಪ್ರದೇಶಗಳಲ್ಲಿ ಈರುಳ್ಳಿ ಚೂರುಗಳನ್ನು ಇರಿಸಿ.

ಈರುಳ್ಳಿ

Pic credit - Pintrest

ಇರುವೆಗಳಿಂದ ತೊಂದರೆಯಾಗಿದ್ದರೆ, ನೀವು ಅವುಗಳು ಓಡಾಡುವ ಸ್ಥಳದಲ್ಲಿ ಅರಿಶಿನ ಪುಡಿ ಸಿಂಪಡಿಸಿ. ಇರುವೆಗಳು ಅಲ್ಲಿಂದ ಕ್ಷಣಾರ್ಧದಲ್ಲಿ ಓಡಿ ಹೋಗುತ್ತವೆ.

ಅರಿಶಿನ

Pic credit - Pintrest

ಈ ಕ್ರಮಗಳ ಜೊತೆಗೆ, ನಿಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಏಕೆಂದರೆ ಅಡುಗೆಮನೆಯಲ್ಲಿ ಚೆಲ್ಲಿದ ಸಿಹಿತಿಂಡಿಗಳು ಅಥವಾ ಸಕ್ಕರೆ ಇರುವೆಗಳನ್ನು ಆಕರ್ಷಿಸುತ್ತದೆ.

ಸ್ವಚ್ಛತೆ

Pic credit - Pintrest