22 Nov 2025

Pic credit - Pintrest

Author: Akshay Pallamjalu 

ಫ್ರಿಡ್ಜ್‌ನಿಂದ ಬರುವ ವಾಸನೆಯನ್ನು ತೊಡೆದುಹಾಕಲು ಇಲ್ಲಿವೆ ಸಲಹೆ

ನಿಮ್ಮ ರೆಫ್ರಿಜರೇಟರ್‌ನಿಂದ ವಾಸನೆಯನ್ನು ತೆಗೆದುಹಾಕಲು, ನೀವು ನಿಂಬೆಹಣ್ಣನ್ನು ಎರಡು ಹೋಳುಗಳಾಗಿ ಕತ್ತರಿಸಿ ರೆಫ್ರಿಜರೇಟರ್‌ನಲ್ಲಿಡಿ.

ನಿಂಬೆ

Pic credit - Pintrest

ಒಂದು ಪ್ಲೇಟ್‌ನಲ್ಲಿ ವಿನೆಗರ್‌ ಹಾಕಿ ಅದನ್ನು ಫ್ರಿಡ್ಜ್‌ ಒಳಗಿಡಿ. ಇದರ ಬಲವಾದ ಸುವಾಸನೆಯು ಫ್ರಿಡ್ಜ್‌ನ ವಾಸನೆಯನ್ನು ನಿವಾರಿಸುತ್ತದೆ.

ವಿನೆಗರ್

Pic credit - Pintrest

ಒಂದು ಸಣ್ಣ ಬಟ್ಟಲಿನಲ್ಲಿ ಅಡಿಗೆ ಸೋಡಾ ತುಂಬಿಸಿ ರೆಫ್ರಿಜರೇಟರ್‌ನ ಒಂದು ಮೂಲೆಯಲ್ಲಿ ಇರಿಸಿ. ಈ ಪುಡಿ ಗಾಳಿಯಲ್ಲಿರುವ ವಾಸನೆ ಉಂಟುಮಾಡುವ ಕಣಗಳನ್ನು ಹೀರಿಕೊಳ್ಳುತ್ತದೆ.

ಅಡಿಗೆ ಸೋಡಾ

Pic credit - Pintrest

ಒಂದು ಪ್ಲೇಟ್‌ನಲ್ಲಿ ಕಾಫಿ ಪುಡಿಯನ್ನು ಹಾಕಿ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟುಬಿಡಿ. ಇದರ ಪರಿಮಳವು ಫ್ರಿಡ್ಜ್‌ ಒಳಗಿನ ವಾಸನೆಯನ್ನು ತಟಸ್ಥಗೊಳಿಸುತ್ತದೆ.

ಕಾಫಿ ಪುಡಿ

Pic credit - Pintrest

ನಿಮ್ಮ ರೆಫ್ರಿಜರೇಟರ್‌ನಿಂದ ವಾಸನೆಯನ್ನು ತೆಗೆದುಹಾಕಲು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸಹ ಬಳಸಬಹುದು.

ಕಿತ್ತಳೆ ಸಿಪ್ಪೆ

Pic credit - Pintrest

ರೆಫ್ರಿಜರೇಟರ್ ಸ್ವಚ್ಛಗೊಳಿಸಿದ ನಂತರ, ಹತ್ತಿ ಉಂಡೆಯನ್ನು ಗುಲಾಬಿ ನೀರಿನಲ್ಲಿ ಅದ್ದಿ ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇರಿಸಿ. ಇದು ವಾಸನೆ ಬರದಂತೆ ತಡೆಯಲು ಸಹಕಾರಿ.

ರೋಸ್ ವಾಟರ್

Pic credit - Pintrest

ಸ್ವಲ್ಪ ಉಪ್ಪನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಇದರಲ್ಲಿಯೇ ವಾರಕ್ಕೊಮ್ಮೆ ಫ್ರಿಡ್ಜ್‌ ಕ್ಲೀನ್‌ ಮಾಡಿ. ಇದು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ ಮತ್ತು ವಾಸನೆಯನ್ನು ತಡೆಯುತ್ತದೆ.

ಉಪ್ಪು ನೀರು

Pic credit - Pintrest

ಫ್ರಿಡ್ಜ್‌ ವಾಸನೆಯನ್ನು ತೊಡೆದುಹಾಕಲು ಮೊದಲ ಮತ್ತು ಪ್ರಮುಖ ಹಂತವೆಂದರೆ ಸ್ವಚ್ಛಗೊಳಿಸುವುದು.  ವಾರಕ್ಕೊಮ್ಮೆ ಸಂಪೂರ್ಣವಾಗಿ ಫ್ರಿಡ್ಜ್‌ ಕ್ಲೀನ್‌ ಮಾಡಿ.  

ಶುಚಿಗೊಳಿಸುವಿಕೆ

Pic credit - Pintrest