20 Nov 2025

Pic credit - Pintrest

Author: Akshay Pallamjalu 

ಹೇರ್‌ ಫಾಲ್‌ ಸಮಸ್ಯೆಗೆ ಇಲ್ಲಿದೆ ನೋಡಿ ಸರಳ ಪರಿಹಾರ

ಕೂದಲು ಆರೋಗ್ಯಕರವಾಗಿರಲು ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡುವುದು ತುಂಬಾನೇ ಮುಖ್ಯ. ವಾರಕ್ಕೆ ಕನಿಷ್ಟ ಮೂರು ದಿನ ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಬೇಕು.

ಎಣ್ಣೆ ಮಸಾಜ್

Pic credit - Pintrest

ವಾರಕ್ಕೆ 2 ಅಥವಾ 3 ಬಾರಿ ತಲೆ ಸ್ನಾನ ಮಾಡಿದರೆ ಸಾಕು.  ಸ್ನಾನ ಮಾಡುವ ಕನಿಷ್ಠ ಅರ್ಧ ಗಂಟೆ ಮೊದಲು ಕೂದಲಿಗೆ ಎಣ್ಣೆ ಹಚ್ಚಿ. ಇದರಿಂದ ಕೂದಲು ಉದುರೋದು ನಿಲ್ಲುತ್ತೆ.

ತಲೆ ಸ್ನಾನ

Pic credit - Pintrest

ತಲೆಸ್ನಾನ ಮಾಡಲು ಉಗುರು ಬೆಚ್ಚಗಿನ ನೀರನ್ನೇ ಬಳಸಿ, ತುಂಬಾ ಬಿಸಿ, ತಣ್ಣನೆಯ ನೀರು ಸೂಕ್ತವಲ್ಲ. ಏಕೆಂದರೆ ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ನೀರು

Pic credit - Pintrest

ಮುಖ್ಯವಾಗಿ ಕೂದಲು ತೊಳೆಯಲು ಸಲ್ಫೇಟ್ ಮುಕ್ತ ಶಾಂಪೂ ಬಳಸಿ ಏಕೆಂದರೆ ಕೂದಲಿಗೆ ಹಾನಿ ಮಾಡುವುದಿಲ್ಲ ಮತ್ತು ನೆತ್ತಿಯ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ.

ಸಲ್ಫೇಟ್ ಫ್ರೀ ಶಾಂಪೂ

Pic credit - Pintrest

ಕೂದಲಿನ ಆರೋಗ್ಯಕ್ಕಾಗಿ ನೀವು ಮೊಟ್ಟೆ, ವಾಲ್ನಟ್ಸ್, ಬಾದಾಮಿ, ನೆಲ್ಲಿ, ಪಾಲಕ್,  ಕ್ಯಾರೆಟ್, ಮೀನು ಇತ್ಯಾದಿ ಪೋಷಕಾಂಶಯುಕ್ತ ಆಹಾರಗಳನ್ನು ಸೇವನೆ ಮಾಡಬೇಕು.

ಸರಿಯಾದ ಪೋಷಣೆ

Pic credit - Pintrest

ಕೂದಲು ಆರೋಗ್ಯಕರವಾಗಿ ಬೆಳೆಯಲು ದೇಹಕ್ಕೆ ಜಲಸಂಚಯನವೂ ಮುಖ್ಯ. ಅದಕ್ಕಾಗಿ ದಿನಕ್ಕೆ ಎರಡರಿಂದ ಮೂರು ಲೀಟರ್‌ ನೀರು ಕುಡಿಯಿರಿ. ಎಳನೀರು, ನಿಂಬೆ ಪಾನಕ ಕುಡಿಯಿರಿ.

ಜಲಸಂಚಯನ

Pic credit - Pintrest

ಕೂದಲು ಉದುರುವಿಕೆಗೆ ಒತ್ತಡವು ಸಾಮಾನ್ಯ ಕಾರಣವಾಗಿದೆ. ಹಾಗಾಗಿ ಧ್ಯಾನ ಮತ್ತು ಯೋಗ ಮಾಡಿ ಈ ಮೂಲಕ ಕೂದಲು ಉದುರುವಿಕೆಯನ್ನು ತಡೆಯಬಹುದು.  

 ಧ್ಯಾನ ಮತ್ತು ಯೋಗ

Pic credit - Pintrest

ನಿದ್ರೆಯ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹಾಗಾಗಿ ಪ್ರತಿದಿನ 7-8 ಗಂಟೆಗಳ ಕಾಲ ನಿದ್ರೆ ಮಾಡಿ.

ಸಾಕಷ್ಟು ನಿದ್ರೆ

Pic credit - Pintrest