Pic Credit: pinterest
By Malashree anchan
5 August 2025
ಮನೆಯ ಪ್ರತಿಯೊಂದು ಮೂಲೆಯಲ್ಲೂ ಕರ್ಪೂರವನ್ನು ಇರಿಸಿ. ಇದು ಇಲಿಗಳನ್ನು ಓಡಿಸಲು ಪರಿಣಾಮಕಾರಿ ಮಾರ್ಗವಾಗಿದೆ.
ಇಲಿಗಳಿಗೆ ಪಲಾವ್ ಎಲೆಯ ಕಟುವಾದ ವಾಸನೆ ಇಷ್ಟವಾಗುವುದಿಲ್ಲ. ಆದ್ದರಿಂದ ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳದಲ್ಲಿ 8-10 ಪಲಾವ್ ಎಲೆಗಳನ್ನು ಇಟ್ಟು ಬಿಡಿ.
ದಾಲ್ಚಿನ್ನಿಯ ಪುಡಿ ತಯಾರಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲಿ ಇರಿಸಿ. ಇಲಿಗಳು ಇವುಗಳ ವಾಸನೆ ಗ್ರಹಿಸಿದರೆ ಅಲ್ಲಿಂದ ಓಡಿ ಹೋಗುತ್ತವೆ.
ಇಲಿಗಳನ್ನು ಮನೆಯಿಂದ ಓಡಿಸಲು ನೀವು ಬೆಳ್ಳುಳ್ಳಿ, ಕರಿಮೆಣಸಿನ ಪುಡಿಯ ಉಂಡೆ ತಯಾರಿಸಿ, ಇಲಿಗಳು ಓಡಾಡುವ ಸ್ಥಳದಲ್ಲಿ ಇಟ್ಟುಬಿಡಿ. ಇದು ಕೂಡ ಪರಿಣಾಮಕಾರಿ ಮಾರ್ಗವಾಗಿದೆ.
ಇಲಿಗಳಿಗೆ ಪುದೀನಾದ ವಾಸನೆಯೂ ಇಷ್ಟವಾಗುವುದಿಲ್ಲ. ಹಾಗಾಗಿ ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯ ಮೂಲೆ ಮೂಲೆಯಲ್ಲಿ ಪದೀನಾ ಎಲೆ ಇಟ್ಟು ಬಿಡಿ.
ನೀವು ಮನೆಯಲ್ಲಿ ಇಲಿಗಳು ಓಡಾಡುವ ಜಾಗದಲ್ಲಿ ಲವಂಗವನ್ನು ಇಡುವುದರಿಂದಲೂ ಇವುಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಕರಿ ಮೆಣಸಿನ ಕಟುವಾದ ವಾಸನೆ ಇರುವಲ್ಲಿ ಇಲಿಗಳು ಓಡಾಡುವುದಿಲ್ಲ. ಹಾಗಾಗಿ ಇಲಿಗಳು ಓಡಾಡುವ ಜಾಗದಲ್ಲಿ 2 ರಿಂದ 3 ಕರಿಮೆಣಸು ಇರಿಸಿ.
ಈರುಳ್ಳಿಯ ಕಟುವಾದ ವಾಸನೆ ಇಲಿಗಳಿಗೆ ಇಷ್ಟವಾಗುವುದಿಲ್ಲ. ನೀವು ಇಲಿಗಳು ಓಡಾಡುವಲ್ಲಿ ಈರುಳ್ಳಿ ಕತ್ತರಿಸಿ ಇಟ್ಟರೆ, ಅವುಗಳ ಕಾಟದಿಂದ ಮುಕ್ತಿ ಪಡೆಯಬಹುದು.