ನಿಮ್ಮ ತ್ವಚೆಗೆ ಅನುಗುಣವಾಗಿ ದಿನಕ್ಕೆ ಎಷ್ಟು ಬಾರಿ ಮುಖ ತೊಳೆಯಬೇಕು?

13 March 2025

Pic credit - Pintrest

Sainanda

ಬೇಸಿಗೆ ಆರಂಭವಾಗಿದೆ, ಸುಡು ಬಿಸಿಲಿನ ನಡುವೆ ತ್ವಚೆಯ ಆರೈಕೆ ಮಾಡುವುದು ಮುಖ್ಯ.

Pic credit - Pintrest

ಹೀಗಾಗಿ ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ಮುಖ ತೊಳೆಯುತ್ತಲೇ ಇರುತ್ತಾರೆ.  ಆದರೆ ನಿಮ್ಮ ಚರ್ಮಕ್ಕೆ ಅನುಗುಣವಾಗಿ ತ್ವಚೆ ತೊಳೆಯುವುದು ಬಹಳ ಮುಖ್ಯ.

Pic credit - Pintrest

ಎಣ್ಣೆಯುಕ್ತ ಚರ್ಮವಾಗಿದ್ದರೆ ಅಂತಹವರು ದಿನಕ್ಕೆ ಎರಡು ಬಾರಿ ಮುಖ ತೊಳೆಯಬೇಕು.

Pic credit - Pintrest

ಎಣ್ಣೆಯುಕ್ತ ಚರ್ಮ ಹೊಂದಿರುವವರು ಈ ರೀತಿ ಮುಖ ತೊಳೆಯುವುದರಿಂದ ತ್ವಚೆಯನ್ನು ನಯಗೊಳಿಸಿ, ಮೊಡವೆಯಾಗದಂತೆ ತಡೆಯಲು ಸಹಕಾರಿಯಾಗಿದೆ.

Pic credit - Pintrest

ಹದಿಹರೆಯದವರು ಹಾಗೂ ವ್ಯಾಯಾಮ ಕ್ರೀಡೆಯಲ್ಲಿ ತೊಡಗಿಕೊಳ್ಳುವವರಾದರೆ ದಿನಕ್ಕೆ ಮೂರು ಬಾರಿ ಮುಖ ತೊಳೆಯುವುದು ಒಳ್ಳೆಯದು.

Pic credit - Pintrest

ಒಣ ಹಾಗೂ ಶುಷ್ಕ ಚರ್ಮ ಹೊಂದಿರುವವರು ದಿನಕ್ಕೆ ಎರಡು ಬಾರಿಯೂ ಮುಖ ತೊಳೆಯುವ ಅಗತ್ಯವಿಲ್ಲ. ದಿನದಲ್ಲಿ ಒಂದು ಬಾರಿ ಮುಖ ತೊಳೆದರೆ ಸಾಕಾಗುತ್ತದೆ.

Pic credit - Pintrest

ತಜ್ಞರು ಹೇಳುವಂತೆ ಬೆಳಗ್ಗೆ ನೀರಿನಿಂದ ಮುಖ ತೊಳೆದರೆ ರಾತ್ರಿ ಕ್ಲೆನ್ಸರ್ ಬಳಸಿ ತ್ವಚೆ ತೊಳೆಯಿರಿ. ಇದು ಶುಷ್ಕತೆ ನಿಯಂತ್ರಿಸಿ ನೈಸರ್ಗಿಕ ತೇವಾಂಶ ಕಾಪಾಡುತ್ತದೆ.

Pic credit - Pintrest