ಗಂಡನ ಅತಿಯಾದ ಕೋಪವನ್ನು ಹೇಗೆ ಕಂಟ್ರೋಲ್‌ ಮಾಡಬಹುದು?

Pic Credit: pinterest

By Malashree Anchan

24 june 2025

ಗಂಡ-ಹೆಂಡ್ತಿ ಜಗಳ

ಕೆಲವೊಂದು ಬಾರಿ ಗಂಡ ಹೆಂಡತಿಯ ಮೇಲೆ ಕೋಪ ಮಾಡಿಕೊಳ್ಳುತ್ತಾನೆ.  ಹಾಗಿರುವಾಗ ಹೆಂಡ್ತಿಯಾದವಳು ಬಹಳ ಜಾಣ್ಮೆಯಿಂದ ಗಂಡನ ಕೋಪವನ್ನು ಕಂಟ್ರೋಲ್‌ಗೆ ತರಬೇಕು.

ತಾಳ್ಮೆಯಿಂದಿರಿ

ನಿಮ್ಮ ಪತಿ ಕೋಪಗೊಂಡಾಗ ಅವರೊಂದಿಗೆ ಶಾಂತವಾಗಿ ಮಾತನಾಡಲು ಪ್ರಯತ್ನಿಸಿ. ತಾಳ್ಮೆಯಿಂದ ಮಾತನಾಡಿ, ಗಂಡನನ್ನು ಸಮಾಧಾನಪಡಿಸಿ.

ಸಮಸ್ಯೆಗಳನ್ನು ಪರಿಹರಿಸಿ

ನಿಮ್ಮ ಸಂಗಾತಿ ಮುಂಗೋಪಿಯಾಗಿದ್ದರೆ, ನೀವು ಅವರನ್ನು ಮನವೊಲಿಸುವಲ್ಲಿ ತುಂಬಾ ತಾಳ್ಮೆ ವಹಿಸಬೇಕು. ಕೋಪಕ್ಕೆ ಕಾರಣವೇನು ಎಂದು ನೋಡಿ ಅದನ್ನು ಪರಿಹರಿಸಲು ಪ್ರಯತ್ನಿಸಿ.

ಗಂಡನ ನಡವಳಿಕೆಯನ್ನು ಹೊಗಳಿ

ನಿಮ್ಮ ಗಂಡನ ಸಕಾರಾತ್ಮಕ ನಡವಳಿಕೆಯನ್ನು  ಪ್ರಶಂಸಿಸಬೇಕು. ಇದರಿಂದ ಅವರ ಕೋಪ ಶಮನಗೊಳ್ಳಬಹುದು.

ಸಮಾಧಾನವಾಗಿರಿ

ನಿಮ್ಮ ಪತಿ ಕೋಪಗೊಂಡಾಗ, ನೀವು ಸಹ ಕೋಪ ಮಾಡಿಕೊಂಡರೆ ಪರಿಸ್ಥಿತಿ  ಇನ್ನಷ್ಟು ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಶಾಂತವಾಗಿರುವುದು ತುಂಬಾನೇ ಮುಖ್ಯ.

ಕೋಪದ ಬಗ್ಗೆ ಮಾತನಾಡಿ

ನಿಮ್ಮ ಗಂಡನ ಕೋಪದ ಸಮಸ್ಯೆಯ ಬಗ್ಗೆ ಮುಕ್ತವಾಗಿ ಮಾತನಾಡಿ. ಅವರ ಕೋಪವು ನಿಮ್ಮ ಸಂಬಂಧವನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದನ್ನು ವಿವರಿಸಿ.  

ಸೂಕ್ತ ಸಮಯವನ್ನು ಆರಿಸಿ

ನಿಮ್ಮ ಗಂಡ ಶಾಂತವಾಗಿರುವಂತಹ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ, ಅವರ ಕೋಪ ನಿಮ್ಮ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿ.

ಕೋಪದ ಕಾರಣ ಹುಡುಕಿ

ನಿಮ್ಮ ಗಂಡನಿಗೆ ಕೋಪ ತರಿಸುವ ವಿಷಯಗಳು ಯಾವುವು? ಮನೆ ಅಥವಾ ಕೆಲಸದ ವಿಚಾರವಾಗಿ ಕೋಪ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ.