Pic Credit: pinterest
By Malashree anchan
30 June 2025
ಗಂಡ ಹೆಂಡತಿಯ ಸಂಬಂಧ ಎನ್ನುವಂತಹದ್ದು ಶಾಶ್ವತ ಬಂಧವಾಗಿದೆ. ಈ ಬಂಧ ನಂಬಿಕೆ, ಪ್ರೀತಿ, ಪರಸ್ಪರ ಗೌರವಗಳ ಮೇಲೆ ನಿಂತಿದೆ.
ಕೆಲ ಗಂಡಸರು ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಅಂತೆಲ್ಲಾ ತನ್ನ ಹೆಂಡತಿಯ ಬಗ್ಗೆ ಇತರರ ಬಳಿ ದೂರುತ್ತಿರುತ್ತಾರೆ.
ಕೆಲವರು ತಮ್ಮ ಸಂಸಾರದ ವಿಷಯಗಳ ಬಗ್ಗೆಯೂ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಮಾಡಬಾರದು, ಸಂಸಾರದಲ್ಲಿ ಒಂದಷ್ಟು ಗೌಪ್ಯತೆ ಅನ್ನೋದು ಇರಬೇಕು.
ಕೆಲವು ಪುರುಷರು ತಮ್ಮ ಹೆಂಡತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು ಹೆಂಡತಿಯ ಆರೋಗ್ಯದ ಬಗ್ಗೆ ದೂರಬಾರದು.
ಹೆಂಡತಿ ಜಗಳ ಮಾಡ್ತಾಳೆ ಅಂತ ಆಕೆಯ ಬಗ್ಗೆ ಆಕೆ ಜಗಳಗಂಟಿ, ಹಾಗೆ ಹೀಗೆ ಅಂತೆಲ್ಲಾ ಇತರರೊಂದಿಗೆ ಹೆಂಡತಿಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಾರದು.
ನಿಮ್ಮ ಪ್ರೀತಿಯ ಬಗ್ಗೆಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಇದು ಸಂಗಾತಿಗಳಿಬ್ಬರ ನಡುವಿನ ಗೌಪ್ಯ ವಿಷಯವಾಗಿದೆ.
ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಅಂಶಗಳು ಇರುವಂತೆ ಏನಾದರೊಂದು ನ್ಯೂನ್ಯತೆ ಇದ್ದೇ ಇರುತ್ತದೆ. ನಿಮ್ಮ ಹೆಂಡತಿಗೂ ದೌರ್ಬಲ್ಯಗಳಿದ್ರೆ ಅದನ್ನು ಯಾರ ಬಳಿಯೂ ಹೇಳಬಾರದು.
ಇನ್ನೊಂದು ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ಇತರರ ಮುಂದೆ ನಿಮ್ಮ ಹೆಂಡತಿಗೆ ಬೈಯುವಂತಹದ್ದು ಅಥವಾ ಆಕೆಯನ್ನು ಟೀಕಿಸುವಂತಹದ್ದನ್ನು ಕೂಡ ಮಾಡಬಾರದು.