ಗಂಡ ಬೇರೆ ಹೆಣ್ಣಿನ ಸಹವಾಸ ಮಾಡ್ಬಾರ್ದು ಎಂದ್ರೆ ಹೀಗೆ ಮಾಡಿ

Pic Credit: pinterest

By Malashree Anchan

4 june 2025

ಗಂಡ ಹೆಂಡತಿ

ಹೆಂಡ್ತಿ ಪ್ರೀತಿ ಕಡಿಮೆಯಾದಾಗ ಗಂಡನ ಮನಸ್ಸು ಬೇರೆ ಹೆಣ್ಣಿನ ಕಡೆಗೆ ವಾಲುತ್ತದೆ. ಹಾಗಾಗಿ ಗಂಡ ಬೇರೆ ಹೆಣ್ಣಿನ ಸಹವಾಸ ಮಾಡ್ಬಾರ್ದು ಎಂದ್ರೆ ಹೆಂಡ್ತಿ ಹೇಗಿರ್ಬೇಕು ಗೊತ್ತಾ?

ಸಂವಹನ

ಸಂವಹನದ ಕೊರತೆಯಿಂದಲೂ ಸಂಬಂಧದಲ್ಲಿ ಅಂತರ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಗಂಡನ ಬಳಿ ಯಾವಾಗಲೂ ಪ್ರೀತಿಯಿಂದ ಮಾತನಾಡಿಸಿ.

ಪ್ರಣಯ

ಹೆಂಡ್ತಿ ರೊಮ್ಯಾಂಟಿಕ್‌ ಆಗಿಲ್ಲ,  ಎಂಬ ಕಾರಣಕ್ಕೆ ಪುರುಷರು ಬೇರೆ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಹಾಗಾಗಿ ಸಂಬಂಧವನ್ನು ರೊಮ್ಯಾಂಟಿಕ್‌ ಆಗಿರಿಸಲು ಪ್ರಯತ್ನಿಸಿ.

ನಂಬಿಕೆ ಇರಲಿ

ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಎನ್ನುವಂತಹದ್ದು ಅತ್ಯಂತ ಮುಖ್ಯ. ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇಡಿ, ಅನುಮಾನ ಪಟ್ಟು ಜಗಳವಾಡಲು ಹೋಗಬೇಡಿ.

ಜಗಳ ಬೇಡ

ಪ್ರತಿ ಬಾರಿ ಗಂಡನ ಜೊತೆ ಜಗಳವಾಡುತ್ತಾ, ನೋವುಂಟು ಮಾಡಿದರೆ ಖಂಡಿತವಾಗಿಯೂ ಆತ ಬೇರೆ ಮಹಿಳೆಯರತ್ತಾ ಆಕರ್ಷಿತನಾಗಬಹುದು. ಹಾಗಾಗಿ ಜಗಳ ಮಾಡಬೇಡಿ.

ಸಮಯ ಕೊಡಿ

ಮನೆ ಕೆಲಸ, ಹೊರಗಿನ ಕೆಲಸ ಎಷ್ಟೇ ಇದ್ದರೂ ಗಂಡನಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ. ಮೂವಿ,  ಡಿನ್ನರ್‌ ಡೇಟ್‌ಗೆ ಹೋಗುವ ಮೂಲಕ ಪರಸ್ಪರ ಸಮಯವನ್ನು ಕಳೆಯಿರಿ.

ಹೊಂದಾಣಿಕೆ

ಇಬ್ಬರ ಮಧ್ಯೆ ಹೊಂದಾಣಿಕೆ ಎನ್ನುವಂತಹದ್ದು ಇರಲಿ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿ. ಇದು  ನಿಮ್ಮ ಸಂಬಂಧವನ್ನು ಬಲ ಪಡಿಸುತ್ತದೆ.

ಪ್ರೀತಿ: 

ಸಂಬಂಧದಲ್ಲಿ ಪ್ರೀತಿ ಎನ್ನುವಂತಹದ್ದು ತುಂಬಾನೇ ಮುಖ್ಯ. ನಿಮ್ಮ ಗಂಡನಿಗೆ ಪ್ರೀತಿ ತೋರಿಸುವುದರಲ್ಲಿ ಎಂದಿಗೂ ಕಮ್ಮಿ ಮಾಡಬೇಡಿ.