Pic Credit: pinterest
By Malashree Anchan
26 May 2025
ಗಂಡ-ಹೆಂಡತಿಯ ಸಂಬಂಧ ಎಲ್ಲಾ ಸಂಬಂಧಕ್ಕಿಂತಲೂ ತುಂಬಾನೇ ವಿಶೇಷವಾದದ್ದು. ಆದ್ರೆ ಕೆಲವೊಂದು ಬಾರೀ ಸಂಗಾತಿಗಳ ಜಗಳ, ಮುನಿಸು, ದಾಂಪತ್ಯದಲ್ಲಿ ವಿರಸ ಮೂಡುತ್ತವೆ.
ಗಂಡ-ಹೆಂಡತಿ ಇಬ್ಬರೂ ಈ ಕೆಲವೊಂದು ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ದಾಂಪತ್ಯ ಜೀವನ ಎನ್ನುವಂತಹದ್ದು ಹಾಲು ಜೇನಿನಂತಿರುತ್ತದೆ.
ನಿಮ್ಮ ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯ ಕಳೆದರೆ ಮಾತ್ರ ನಿಮ್ಮ ದಾಂಪತ್ಯದಲ್ಲಿ ಪ್ರೀತಿ ಮತ್ತು ಸಂತೋಷ ಎಂಬುದು ಇರುತ್ತದೆ.
ಜಗಳಗಳು ನಡೆದರೂ ಸಂಗಾತಿಗಳು ಮಾತು ಬಿಡಬಾರದು. ಇಬ್ಬರೂ ಮುನಿಸನ್ನು ಪಕ್ಕಕ್ಕಿಟ್ಟು ಪರಸ್ಪರ ಮಾತನಾಡಿಕೊಳ್ಳಬೇಕು. ಆಗ ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸುತ್ತದೆ.
ಗಂಡ ಹೆಂತಿಯ ನಡುವೆ ಪರಸ್ಪರ ಗೌರವ, ಕಾಳಜಿ ಇದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ.
ತಪ್ಪುಗಳನ್ನು ಕ್ಷಮಿಸಿ. ಒಂದು ಕ್ಷಮೆ ಸಂಗಾತಿಗಳಿಬ್ಬರ ಮನಸ್ಸನ್ನು ಹಗುರಗೊಳಿಸುತ್ತದೆ ಮತ್ತು ಸಂಬಂಧವನ್ನು ಬಲಪಡಿಸುತ್ತದೆ.
ಗಂಡ ಹೆಂಡತಿ ಇಬ್ಬರೂ ತಮ್ಮ ಸಂಗಾತಿಯ ಆಶಯ, ಅಭಿಲಾಶೆಗಳನ್ನು ಗೌರವಿಸಬೇಕು. ಆಗ ದಾಂಪತ್ಯದಲ್ಲಿ ವಿರಸ ಎಂಬುದು ಇರೋಲ್ಲ.
ಸಂಬಂಧದಲ್ಲಿ ನಂಬಿಕೆ ಎನ್ನುವುದು ಬಹು ಮುಖ್ಯವಾಗಿ ಇರಲೇಬೇಕು. ಇದು ಖಂಡಿತವಾಗಿಯೂ ಸಂಬಂಧವನ್ನು ಬಲಪಡಿಸುತ್ತದೆ.