Pic Credit: pinterest
By Malashree anchan
21 July 2025
ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಜಗಳ ಎನ್ನುವಂತಹದ್ದು ಇದ್ದೇ ಇರುತ್ತದೆ. ಹೀಗೆ ಜಗಳ ಆಗಬಾರದು ಎಂದರೆ ಸೊಸೆಯಾದವಳು ಈ ಒಂದಷ್ಟು ಸಲಹೆಗಳನ್ನು ಪಾಲಿಸಬೇಕು.
ಸೊಸೆ ಏನಾದ್ರೂ ತಪ್ಪು ಮಾಡಿದ್ರೆ ಖಂಡಿತವಾಗಿಯೂ ಅತ್ತೆ ಕೋಪ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ನೀವು ಸಹ ಕೋಪ ಮಾಡದೆ ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸಿ.
ಅತ್ತೆ ಏನಾದ್ರೂ ಹೇಳಿದ್ರೆ ಅದಕ್ಕೆ ನೀವು ಎದುರು ಮಾತನಾಡಲು ಹೋಗಬೇಡಿ. ನೀವು ಹೀಗೆ ವಾದ ಮಾಡಿದರೆ ಅಲ್ಲಿ ಜಗಳಗಳು ಏರ್ಪಡುವ ಸಾಧ್ಯತೆ ಇರುತ್ತದೆ.
ಕೆಲವರು ಅತ್ತೆ ಏನೇ ಹೇಳಿದ್ರೂ ಕೋಪ ಮಾಡಿಕೊಳ್ಳುತ್ತಾರೆ. ಹೀಗೆ ಅತ್ತೆ ಹೇಳಿದ ಪ್ರತಿಯೊಂದು ವಿಷಯಕ್ಕೂ ಕೋಪ ಮಾಡಿಕೊಂಡರೆ ನಿಮ್ಮ ಸಂಬಂಧ ಹದಗೆಡುತ್ತದೆ.
ಅತ್ತೆ ಮೇಲೆ ಕೋಪದಲ್ಲಿರೇಗಾಡಬೇಡಿ. ಹೀಗೆ ಮಾಡುವುದರಿಂದ ಜಗಳ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.
ಮೊದಲು ನೀವು ನಿಮ್ಮ ಅತ್ತೆ ಮಾವನನ್ನು ನಿಮ್ಮ ಹೆತ್ತವರಂತೆ ನೋಡಿಕೊಳ್ಳಲು ಪ್ರಾರಂಭಿಸಿ. ಹೀಗಿದ್ದರೆ ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ.
ಅತ್ತೆಯೊಂದಿಗಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದ್ದಂತೆ, ಮಾತು ಬಿಡುವುದಕ್ಕಿಂತ ಹೀಗೆಲ್ಲಾ ಕೋಪ ಮಾಡುವುದು ಸರಿಯಲ್ಲ ಎಂದು ಅರ್ಥವಾಗುವಂತೆ ಹೇಳಿ.
ನಿಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಾ ಹೋದರೆ ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿ, ಸಂಬಂಧದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ.