Pic Credit: pinterest
By Malashree Anchan
27 May 2025
ಪಾರಿವಾಳವು ಶಾಂತಿ, ಸಂತೋಷ ಮತ್ತು ಶುದ್ಧತೆಯ ಸಂಕೇತವಾಗಿದೆ. ಶಾಂತಿಯ ಸಂಕೇತವಾಗಿರುವ ಈ ಹಕ್ಕಿಗಳು ಮನೆಗೆ ಬಂದ್ರೆ ಶುಭವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಮನೆಯಲ್ಲಿ ನಮಿಲು ಗರಿಗಳನ್ನು ಇಟ್ಟುಕೊಳ್ಳುವುದು ತುಂಬಾ ಶುಭವೆಂದು ಶಾಸ್ತ್ರಗಳಲ್ಲಿ ಪರಿಗಣಿಸಲಾಗಿದೆ. ಅದೇ ರೀತಿ ಪಾರಿವಾಳದ ಗರಿಯನ್ನು ಇಟ್ಟುಕೊಳ್ಳುವುದು ಸಹ ಒಳ್ಳೆಯದಂತೆ.
ಶಾಸ್ತ್ರದ ಪ್ರಕಾರ, ಬಿದ್ದ ಪಾರಿವಾಳದ ಗರಿಯನ್ನು ಬಿಳಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಇಡಬೇಕು. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತಂತೆ.
ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಪಾರಿವಾಳದ ಗರಿಯನ್ನು ಇಟ್ಟರೆ ಬಡತನ ದೂರವಾಗುತ್ತದೆ ಮತ್ತು ಸಮೃದ್ಧಿ ನೆಲೆಸುತ್ತದೆ.
ಮನೆಯಲ್ಲಿ ಪಾರಿವಾಳದ ಗರಿಗಳನ್ನು ಇಟ್ಟುಕೊಳ್ಳುವವರ ಮನೆಯಲ್ಲಿ ಸಂಪತ್ತಿನ ಅಧಿದೇವತೆ ನೆಲೆಸುತ್ತಾಳೆ ಇದರಿಂದ ಮನೆಯಲ್ಲಿರುವ ಜನರ ಆದಾಯ ಹೆಚ್ಚಾಗುತ್ತದೆ. ಹೇಳಲಾಗುತ್ತದೆ.
ಇದರಿಂದ ನಕಾರಾತ್ಮಕ ವಿಷಯಗಳು, ಶಕ್ತಿಗಳು ಮನೆಯಿಂದ ದೂರವಿರುತ್ತವೆ. ಅಲ್ಲದೆ ಮನೆಯ ಸಮಸ್ಯೆಗಳು ದೂರವಾಗುತ್ತದೆ ಎಂದು ನಂಬಲಾಗಿದೆ.
ನಂಬಿಕೆಗಳ ಪ್ರಕಾರ ಮನೆಯಲ್ಲಿ ಪಾರಿವಾಳದ ಗರಿಯನ್ನು ಇಟ್ಟುಕೊಳ್ಳುವುದರಿಂದ ಮನೆ ತುಂಬಾ ಸಕಾರಾತ್ಮಕ ಶಕ್ತಿ ಹರಡುತ್ತದೆ.
ಪಾರಿವಾಳದ ಗರಿಯನ್ನು ವಾಸದ ಕೋಣೆಯ ದಕ್ಷಿಣ ಮೂಲೆಯಲ್ಲಿ, ಅಡುಗೆ ಕೋಣೆಯ ಉತ್ತರ ಮೂಲೆಯಲ್ಲಿ ಮತ್ತು ಮಲಗುವ ಕೋಣೆಯ ಪೂರ್ವ ಮೂಲೆಯಲ್ಲಿ ಇಟ್ಟರೆ ಒಳ್ಳೆಯದು.