21 Oct 2025

Pic credit - Pintrest

Author: Bhavana Hegde

ಚಳಿಗೆ ಚರ್ಮ ಒಣಗಿ ಸುಕ್ಕುಗಟ್ಟಿದೆಯೇ?  ಸಿಂಪಲ್ ಟಿಪ್ಸ್ ಇಲ್ಲಿದೆ

ಚಳಿಗಾಲದಲ್ಲಿ ಚರ್ಮದ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ. ಹಾಗಾಗಿ, ಮುಖ ಹಾಗೂ ದೇಹಕ್ಕೆ ಮಾಯಿಶ್ಚರೈಸರ್ ಅನ್ನು ಹೆಚ್ಚಾಗಿ ಹಚ್ಚಿ.

ಾಯಿಶ್ಚರೈಸರ್ ಹಚ್ಚಿ

Pic credit - Pintrest

ಚಳಿಯಲ್ಲಿ ಬಿಸಿ ನೀರು ಆಹ್ಲಾದಕರವೆನಿಸಿದರೂ ಇದು ಚರ್ಮದ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ.  ಉಗುರು ಬೆಚ್ಚಗಿನ ನೀರಿನಲ್ಲಿ ಕಡಿಮೆ ಅವಧಿಗೆ ಸ್ನಾನ ಮಾಡಿ.

ಬಿಸಿ ನೀರಿನ ಸ್ನಾನ ಬೇಡ

Pic credit - Pintrest

ಕಠಿಣವಾದ ಮತ್ತು ಹೆಚ್ಚು ನೊರೆ ಬರುವ ಕ್ಲೆನ್ಸರ್ ಬದಲಿಗೆ, ಹೈಡ್ರೇಟಿಂಗ್ ಅಥವಾ ಕ್ರೀಮಿ ಕ್ಲೆನ್ಸರ್ ಬಳಸಿ. ಇದು ಚರ್ಮದ ತೇವಾಂಶವನ್ನು ಹಾಳು ಮಾಡದೆ ಸ್ವಚ್ಛಗೊಳಿಸುತ್ತದೆ.

 ಕ್ಲೆನ್ಸರ್ ಬಳಸಿ

Pic credit - Pintrest

ದೇಹದ ಒಳಭಾಗದಿಂದಲೂ ಹೈಡ್ರೇಟ್ ಆಗಿರುವುದು ಮುಖ್ಯ. ನೀರು ಮತ್ತು ಹಣ್ಣಿನ ರಸಗಳನ್ನು ಹೆಚ್ಚು ಸೇವಿಸಿ. ಸಾಕಷ್ಟು ಪ್ರಮಾಣದ ನೀರು ಕುಡಿಯುವುದು ಚರ್ಮದ ಆರೋಗ್ಯಕ್ಕೆ ಬಹಳ ಮುಖ್ಯ.

ನೀರು ಜಾಸ್ತಿ ಕುಡಿಯಿರಿ

Pic credit - Pintrest

ಚಳಿಗಾಲದಲ್ಲೂ ಸೂರ್ಯನ ಹಾನಿಕಾರಕ ಯುವಿ ಕಿರಣಗಳು ಚರ್ಮವನ್ನು ತಲುಪುತ್ತವೆ. ಹಾಗಾಗಿ, ದಿನನಿತ್ಯ ಕನಿಷ್ಠ ಎಸ್‌ಪಿಎಫ್ 30 ಇರುವ ಸನ್‌ಸ್ಕ್ರೀನ್ ಹಚ್ಚುವುದನ್ನು ಮರೆಯಬೇಡಿ.

 ಸನ್‌ಸ್ಕ್ರೀನ್ ಹಚ್ಚಿ

Pic credit - Pintrest

ವಾರಕ್ಕೆ ಒಂದರಿಂದ ಎರಡು ಬಾರಿ ಸೌಮ್ಯವಾಗಿ ಎಕ್ಸ್‌ಫೋಲಿಯೇಟ್ ಮಾಡುವುದರಿಂದ ಸತ್ತ ಚರ್ಮದ ಕೋಶಗಳು ನಿವಾರಣೆಯಾಗಿ, ಮಾಯಿಶ್ಚರೈಸರ್ ಚೆನ್ನಾಗಿ ಹೀರಿಕೊಳ್ಳುತ್ತದೆ.

ಎಕ್ಸ್‌ಫೋಲಿಯೇಟ್ ಮಾಡಿ

Pic credit - Pintrest

ತುಟಿಗಳ ಚರ್ಮವು ತೆಳ್ಳಗಿರುವುದರಿಂದ ಚಳಿಗಾಲದಲ್ಲಿ ಬೇಗ ಒಡೆಯುತ್ತದೆ. ವ್ಯಾಸಲೀನ್ ಅಥವಾ ಲಿಪ್ ಬಾಮ್ ಬಳಸಿ ತುಟಿಗಳನ್ನು ತೇವವಾಗಿಡಿ.

ತುಟಿಗಳ ರಕ್ಷಣೆ ಮಾಡಿ

Pic credit - Pintrest

ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೆಚ್ಚಿರುವ ಆಹಾರ ಪದಾರ್ಥಗಳಾದ ಸಾಲ್ಮನ್, ಆವಕಾಡೊ, ಬೀಜಗಳು ಮತ್ತು ಹಸಿರು ತರಕಾರಿಗಳನ್ನು ಸೇವಿಸಿ.

ಹೆಲ್ದಿ ಆಹಾರ ಸೇವಿಸಿ

Pic credit - Pintrest