Pic Credit: pinterest
By Malashree anchan
19 September 2025
ನಿಮ್ಮ ಜೀವನದಲ್ಲಿನ ಒಳ್ಳೆಯ ವಿಷಯಗಳಿಗೆ ಪ್ರತಿದಿನ ಥ್ಯಾಂಕ್ಸ್ ಹೇಳಿ. ಈ ಕೃತಜ್ಞತಾ ಗುಣ ನಿಮ್ಮನ್ನು ನಕಾರಾತ್ಮಕ ಆಲೋಚನೆಗಳಿಂದ ಮುಕ್ತಗೊಳಿಸುತ್ತದೆ.
ನಿಮ್ಮನ್ನು ನಿಯಂತ್ರಿಸುವ, ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸುವ ವ್ಯಕ್ತಿಯ ಜೊತೆ ಇರಬಾರದು ಅವರು ಯಾವತ್ತಿದ್ದರೂ ಅಪಾಯಕಾರಿ.
ತಮ್ಮ ಲಾಭವನ್ನೇ ಬಯಸುವವರು, ತಮ್ಮ ಲಾಭಕ್ಕಾಗಿ ಇತರರೊಂದಿಗೆ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಅಂತಹ ಜನರೊಂದಿಗೆ ಯಾವತ್ತಿಗೂ ಸಂಬಂಧವನ್ನು ಇಟ್ಟುಕೊಳ್ಳಬಾರದು.
ನಿಮ್ಮ ಯಶಸ್ಸಿನ ಬಗ್ಗೆ ಅಸೂಯೆ ಪಡುವ, ಯಾವಾಗಲೂ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಇಂತಹ ಜನರಿಂದ ಜೀವನವೇ ನರಕವಾಗುತ್ತದೆ.
ಕೇವಲ ಹಣದ ಹಿಂದೆ ಬಿದ್ದಿರುವ ಜನರಿಂದ ದೂರವಿರಿ. ಅಂತಹ ಜನರು ಸಂಬಂಧಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ.
ಮೂರ್ಖ ಜನರಿಂದ ಸಾಧ್ಯವಿದ್ದಷ್ಟು ದೂರವಿರಬೇಕು. ಇಂತಹ ಜನರ ಸ್ನೇಹ ಬೆಳೆಸುವುದರಿಂದ ಸಮಯ ವ್ಯರ್ಥ ವ್ಯರ್ಥ.
ದುಷ್ಟ ಜನರೊಂದಿಗೆ ಸ್ನೇಹ ಬೆಳೆಸುವುದು ತುಂಬಾನೇ ಅಪಾಯ. ಇಂತಹ ಜನರು ಪ್ರತಿ ಹಂತದಲ್ಲೂ ಹಾನಿ ಮಾಡಲು ಪ್ರಯತ್ನಿಸುತ್ತಾರೆ.
ನಿಮ್ಮನ್ನು ಪ್ರತಿಯೊಂದು ವಿಷಯಗಳಿಗೆ ನಿಮ್ಮನ್ನು ಅವಮಾನಿಸುವಂತಹ ಸಾಧ್ಯವಾದಷ್ಟು ದೂರವಿರಿ. ಅವರು ನಿಮ್ಮನ್ನು ಬೆಳೆಯಲು ಬಿಡುವುದಿಲ್ಲ.