Pic Credit: pinterest
By Malashree anchan
20 September 2025
ನೀವು ನೋವಿನಲ್ಲಿರುವಂತಹ ಸಮಯದಲ್ಲಿ ಮಾತನಾಡಲು ಸರಿಯಾದ ಪದಗಳೇ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಮೌನವಾಗಿರುವುದೇ ಉತ್ತಮ.
ಜಗಳದ ಸಮಯದಲ್ಲಿ ಮಾತನಾಡುವುದಕ್ಕಿಂತ ಮೌನವಾಗಿರುವುದು ಉತ್ತಮ. ಇದು ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೋಪವನ್ನು ನಿಯಂತ್ರಿಸಲು ಮೌನವಾಗಿರುವುದು ಉತ್ತಮ. ಈ ಸಮಯದಲ್ಲಿ ಅನಗತ್ಯವಾಗಿ ಮಾತನಾಡುವುದರಿಂದ ಮನಸ್ಥಿತಿ ಇನ್ನಷ್ಟು ಹದಗೆಡುತ್ತದೆ.
ಇತರರು ಯಾರಾದರೂ ನಿಮ್ಮ ಕಣ್ಣ ಮುಂದೆ ತಪ್ಪು ಮಾಡಿದರೆ, ಆ ಸಂದರ್ಭದಲ್ಲಿ ನೀವು ಮೌನವಾಗಿರುವುದು ಉತ್ತಮ. ಇದರಿಂದ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾರೆ.
ಯಾರಾದರೂ ನಿಮಗೆ ಪ್ರಶ್ನೆ ಕೇಳಿದಾಗ ನಿಮಗೆ ಆ ಬಗ್ಗೆ ಸರಿಯಾದ ಉತ್ತರ ತಿಳಿಯದಿದ್ದರೆ ಸಮ್ಮನಿರಿ, ನಂತರ ಯೋಚಿಸಿ ಉತ್ತರ ನೀಡಿ.
ಕೆಲವೊಮ್ಮೆ ಪ್ರೀತಿಯನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಆ ಸಂದರ್ಭದಲ್ಲಿ ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಮೌನವಾಗಿರುವುದು ಉತ್ತಮ.
ಇತರರು ಯಶಸ್ಸನ್ನು ಸಾಧಿಸಿದಾಗ ನಿಮಗೆ ಅವರನ್ನು ಅಬಿನಂದಿಸಲು ನಿಮಗೆ ಪದಗಳು ಸಿಗದಿದ್ದರೆ, ನೀವು ನಗುವಿನೊಂದಿಗೆ ಅವರನ್ನು ಮೌನವಾಗಿ ಅಭಿನಂದಿಸಬಹುದು.
ಕೆಲವೊಮ್ಮೆ ಮಾತುಗಳಿಂದ ಯಾವುದೇ ಪ್ರಯೋಜನಗಳಿಲ್ಲ ಎಂದೆನಿಸಿದಾಗ ನೀವು ಮೌನವಾಗಿ ಉಸ್ತುವಾರಿ ನಡೆಸಬಹುದು.