Pic Credit: pinterest
By Malashree Anchan
09 May 2025
ಈ ಉರಿ ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಪ್ಪಿಸಲು ಮತ್ತು ದೇಹ ತಂಪಾಗಿರಿಸಲು ಬಯಸಿದರೆ ಈ ಕೆಲವು ಭಾರತೀಯ ಭಕ್ಷ್ಯ, ಪಾನೀಯಗಳನ್ನು ನೀವು ತಪ್ಪದೆ ಸವಿಯಬೇಕು.
ರಾಗಿ ಅಂಬಲಿ ದೇಹಕ್ಕೆ ಜಲಸಂಚಯನವನ್ನು ಒದಗಿಸುವುದು ಮಾತ್ರವಲ್ಲದೆ ಬೇಸಿಗೆಯಲ್ಲಿ ನಿಮ್ಮ ಶಕ್ತಿ ಕುಂದದ ಹಾಗೆ ನೋಡಿಕೊಳ್ಳುತ್ತದೆ, ದೇಹವನ್ನು ತಂಪಾಗಿರಿಸುತ್ತದೆ.
ಒಡಿಶಾ ಮತ್ತು ಛತ್ತೀಸ್‌ಗಢದ ಸಾಂಪ್ರದಾಯಿಕ ಖಾದ್ಯವಾಗಿರುವ ಪಖಲಾ ಭಟ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ದೇಹವನ್ನು ಒಳಗಿನಿಂದ ತಂಪಾಗಿರಿಸುವ ಕಾರಣದಿಂದ ಇದು ಬೇಸಿಗೆಗೆ ಹೇಳಿ ಮಾಡಿಸಿದ ಭಕ್ಷ್ಯವಾಗಿದೆ.
ಕಡಲೆ ಹಿಟ್ಟಿನಿಂದ ತಯಾರಿಸುವ ಸಟ್ಟು ಪರಾಠ ಬಿಹಾರ, ಜಾರ್ಖಂಡ್‌ನಲ್ಲಿ ಫೇಮಸ್ ಖಾದ್ಯವಾಗಿದೆ. ಇದನ್ನು ತಿನ್ನುವ ಮೂಲಕವೂ ದೇಹ ತಂಪಾಗಿರಿಸಬಹುದು.
ಲಾವಂಚ ಬೇರಿನ ಜ್ಯೂಸ್ ಅಥವಾ ಖುಸ್ ಶರ್ಬತ್ ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯವಾಗಿದ್ದು, ಇದು ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ.
ಮಸಾಲ ಮಜ್ಜಿಗೆ ರುಚಿಕರ ಮಾತ್ರವಲ್ಲದೆ ಆರೋಗ್ಯಕ್ಕೂ ಹಿತಕರ. ಇದು ದೇಹವನ್ನು ತಂಪಾಗಿರಿಸುವ ಕಾರಣ ಸುಡು ಬೇಸಿಗೆಯಲ್ಲಿ ತಪ್ಪದೆ ಈ ಪಾನೀಯವನ್ನು ಸವಿಯಿರಿ.
ಬೆಲ್ಲ, ಒಣಶುಂಠಿ, ಏಲಕ್ಕಿ ಮತ್ತು ನಿಂಬೆಹಣ್ಣಿನಂತಹ ಹಲವಾರು ವಸ್ತುಗಳನ್ನು ಸೇರಿಸಿ ತಯಾರಿಸುವ ಪಾನಕ ಕೂಡಾ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಿದೆ.
ಈ ಸುಡು ಬೇಸಿಗೆಯಲ್ಲಿ ಆಮ್ರಾಸ್ ಅಥವಾ ಮಾವಿನ ರಸ ಸವಿಯುವುದು ಕೂಡಾ ತುಂಬಾನೇ ಒಳ್ಳೆಯದು.