ಇದೇ ಕಾರಣಕ್ಕೆ ಎಲ್ಲರೂ ಡಿಜಿಟಲ್‌ ಉಪವಾಸ ಮಾಡಬೇಕಂತೆ

Pic Credit: pinterest

By Malashree anchan

11 September  2025

ಡಿಜಿಟಲ್‌ ಉಪವಾಸ

ಡಿಜಿಟಲ್‌ ಉಪವಾಸ ಎಂದರೆ ಮೊಬೈಲ್‌, ಟಿವಿ, ಲ್ಯಾಪ್‌ಟಾಪ್‌, ಸಾಮಾಜಿಕ ಮಾಧ್ಯಮ ಸೇರಿದಂತೆ ಎಲ್ಲಾ ಡಿಜಿಟಲ್‌ ಸಾಧನಗಳಿಂದ ಸ್ವಲ್ಪ ಸಮಯ ದೂರವಿರುವುದು.

ಮಾನಸಿಕ ಶಾಂತಿ

ಡಿಜಿಟಲ್‌ ಸಾಧನಗಳ ನಿರಂತರ ಬಳಕೆಯಿಂದ ಮೆದುಳು ದಣಿದಿರುತ್ತದೆ. ಈಗಿರುವಾಗ ಇವುಗಳಿಂದ ಸ್ವಲ್ಪ ಸಮಯ ದೂರವಿದ್ದರೆ ಮೆದುಳಿಗೆ ವಿಶ್ರಾಂತಿ ಲಭಿಸುತ್ತದೆ.

ಉತ್ತಮ ನಿದ್ರೆ

ಮೊಬೈಲ್‌ ಇತ್ಯಾದಿ ಡಿಜಿಟಲ್‌ ಸಾಧನಗಳ ನೀಲಿ ಬೆಳಕು ನಿದ್ರೆಗೆ ಭಂಗ ತರುತ್ತದೆ. ಆದರೆ ಡಿಜಿಟಲ್‌ ಉಪವಾಸ ನಿಮಗೆ ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಸಂಬಂಧಗಳ ಸುಧಾರಣೆ

ನಾವು ಫೋನ್‌ನಿಂದ ದೂರವಿದ್ದಷ್ಟು ಕುಟುಂಬ, ಕುಟುಂಬ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ. ಇದರಿಂದ ಸಂಬಂಧವೂ ಬಲಗೊಳ್ಳುತ್ತದೆ.

ಕಣ್ಣುಗಳಿಗೆ ವಿಶ್ರಾಂತಿ

ಹೆಚ್ಚು ಮೊಬೈಲ್‌ ಪರದೆ ನೋಡುವುದರಿಂದ ಕಣ್ಣುಗಳಿಗೆ ಒತ್ತಡ ಮತ್ತು ಕಿರಿಕಿರಿ ಉಂಟಾಗುತ್ತದೆ. ಡಿಜಿಟಲ್‌ ಉಪವಾಸ ಮಾಡುವುದರಿಂದ ಕಣ್ಣಿಗೆ ವಿಶ್ರಾಂತಿ ಲಭಿಸುತ್ತದೆ.

ಒತ್ತಡದಿಂದ ಮುಕ್ತಿ

ಡಿಜಿಟಲ್‌ ಉಪವಾಸ ಮಾಡುವುದರಿಂದ ಮಾನಸಿಕ ಒತ್ತಡವನ್ನು ಕಡಿಮೆಯಾಗುತ್ತದೆ ಮತ್ತು ಇದು ನಿಮ್ಮ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ.

ಉತ್ಪಾದಕತೆ ಹೆಚ್ಚಳ

ಹೆಚ್ಚು ಮೊಬೈಲ್‌ ಬಳಕೆಯಿಂದ ನೀವು ಇತರ ಕೆಲಸಗಳಿಗೆ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಆದರೆ  ಡಿಜಿಟಲ್ ಉಪವಾಸ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಸೃಜನಶೀಲತೆಯ ಹೆಚ್ಚಳ

ಮೊಬೈಲ್‌ನಿಂದ ದೂರವಿದ್ದು ಡಿಜಿಟಲ್‌ ಉಪವಾಸ ಮಾಡಿದಾಗ, ಮನಸ್ಸಿಗೆ ಯೋಚಿಸಲು ಸಮಯ ಸಿಗುತ್ತದೆ. ಇದು ಹೊಸ ಆಲೋಚನೆಗಳು ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.