Pic Credit: pinterest
By Malashree anchan
10 September 2025
ಗುಲಾಬಿ ಟೀಯಲ್ಲಿ ಉತ್ಕರ್ಷಣ ನಿರೋಧಕ, ವಿಟಮಿನ್ ಸಿ ಅಂಶವಿದ್ದು, ಇದು ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯುತ್ತದೆ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ಗುಲಾಬಿ ಚಹಾವನ್ನು ಕುಡಿಯುವುದರಿಂದ ಮುಖದ ಮೇಲಿನ ಕಲೆಗಳು ಕಡಿಮೆಯಾಗುತ್ತವೆ. ಮತ್ತು ಮುಖದ ಹೊಳಪು ಹೆಚ್ಚಾಗುತ್ತದೆ.
ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.
ರೋಸ್ ಟೀಯಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳಿದ್ದು, ಇದು ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಗುಲಾಬಿ ಚಹಾ ಸೇವಿಸುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಗುಲಾಬಿ ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಗುಲಾಬಿ ಚಹಾ ಮಹಿಳೆಯರಿಗೆ ವರದಾನ. ಈ ಚಹಾ ಕುಡಿಯುವುದರಿಂದ ಮುಟ್ಟಿನ ನೋವು ನಿವಾರಣೆಯಾಗುತ್ತದೆ.
ಗುಲಾಬಿ ಚಹಾಕ್ಕೆ ಹಾಲು ಸೇರಿಸುವುದರಿಂದ ಇದು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನ ಉತ್ತಮ ಮೂಲವಾಗಿದೆ. ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.