ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
Tv9 Kannada Logo

ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

Pic Credit: pinterest

By Malashree anchan

03 July 2025

ಅನೇಕರಿಗೆ ಪುಸ್ತಕ ಓದುವ ಹವ್ಯಾಸಗಳಿರುತ್ತದೆ. ಹೀಗೆ ಪುಸ್ತಕ ಓದುವುದು ಟೈಮ್‌ ಪಾಸ್‌ ಮಾತ್ರವಲ್ಲ, ಇದರಿಂದ ಸಾಕಷ್ಟು ಪ್ರಯೋಜನಗಳು ಕೂಡ ಇವೆಯಂತೆ.

ಪುಸ್ತಕ ಓದುವ ಅಭ್ಯಾಸ

ಅನೇಕರಿಗೆ ಪುಸ್ತಕ ಓದುವ ಹವ್ಯಾಸಗಳಿರುತ್ತದೆ. ಹೀಗೆ ಪುಸ್ತಕ ಓದುವುದು ಟೈಮ್‌ ಪಾಸ್‌ ಮಾತ್ರವಲ್ಲ, ಇದರಿಂದ ಸಾಕಷ್ಟು ಪ್ರಯೋಜನಗಳು ಕೂಡ ಇವೆಯಂತೆ.

ಪುಸ್ತಕ ಓದುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ನಿಮಗೆ ಆರಾಮದಾಯಕ, ಶಾಂತ ಭಾವನೆಯನ್ನು ನೀಡುತ್ತದೆ. ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ.

ಒತ್ತಡ

ಪುಸ್ತಕ ಓದುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ನಿಮಗೆ ಆರಾಮದಾಯಕ, ಶಾಂತ ಭಾವನೆಯನ್ನು ನೀಡುತ್ತದೆ. ನಿಮ್ಮನ್ನು ಮಾನಸಿಕವಾಗಿ ಬಲಶಾಲಿಯನ್ನಾಗಿ ಮಾಡುತ್ತದೆ.

ನೀವು ಇಷ್ಟಪಡುವ ವಿಷಯಗಳ ಕುರಿತ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ಲಭಿಸುತ್ತದೆ.

ಸಂತೋಷ

ನೀವು ಇಷ್ಟಪಡುವ ವಿಷಯಗಳ ಕುರಿತ ಪುಸ್ತಕಗಳನ್ನು ಓದುವುದರಿಂದ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ಲಭಿಸುತ್ತದೆ.

ಮನೋಸ್ಥೈಯ

ಕೆಲವು ಸ್ಫೂರ್ತಿದಾಯಕ ಪುಸ್ತಕಗಳನ್ನು ಓದುವುದರಿಂದ ಮನೋಸ್ಥೈರ್ಯ ಹೆಚ್ಚುತ್ತದೆ. ಆ ಪುಸ್ತಕಗಳು ನಿಮಗೆ ಧೈರ್ಯ ಮತ್ತು ಭರವಸೆಯನ್ನು ಸಹ ನೀಡಬಲ್ಲವು.

ಆತ್ಮ ವಿಶ್ವಾಸ

ಒಳ್ಳೆಯ ಪುಸ್ತಕಗಳನ್ನು ಓದುವುದರಿಂದ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

ಒಳ್ಳೆಯ ನಿದ್ರೆ

ಮಲಗುವ ಮುನ್ನ ಒಳ್ಳೆಯ ಪುಸ್ತಕ ಓದುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ. ಮತ್ತು ಚೆನ್ನಾಗಿ ನಿದ್ರೆ ಬರುತ್ತದೆ.

ನೋವು

ನಮಗೆ ಎಷ್ಟೇ ಸಮಸ್ಯೆಗಳಿದ್ದರೂ, ನೋವುಗಳಿದ್ದರೂ ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ ಆ ನೋವನ್ನು ದೂರ ಮಾಡಬಹುದು.  

ಮರೆವು ದೂರವಾಗುತ್ತದೆ

ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರಿಂದ ಮೆದುಳು ಸಹ ಚುರುಕುಗೊಳ್ಳುತ್ತದೆ. ಇದು ಮರೆವಿನ ಕಾಯಿಲೆಯನ್ನು ಸಹ ದೂರ ಮಾಡುತ್ತದೆ.