ತ್ವಚೆಯ ಹೊಳಪು ಹೆಚ್ಚಿಸಲು ಪುರುಷರು ಈ ಸಲಹೆ ತಪ್ಪದೆ ಪಾಲಿಸಬೇಕು

Pic Credit: pinterest

By Malashree anchan

13 August 2025 

ತ್ವಚೆಯ ಆರೈಕೆ

ಪುರುಷರಲ್ಲೂ ಮೊಡವೆ ಇತ್ಯಾದಿ ತ್ವಚೆಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ  ಚರ್ಮದ ಆರೋಗ್ಯ ಕಾಪಾಡಲು ಕೆಲವು ಸಲಹೆಗಳನ್ನು ತಪ್ಪದೆ ಪಾಲಿಸಬೇಕು.

ಮುಖದ ಸ್ವಚ್ಛತೆ

ಪುರುಷರ ಚರ್ಮ ಹೆಚ್ಚು ಎಣ್ಣೆ ಮತ್ತು ಧೂಳನ್ನು ಸಂಗ್ರಹಿಸುತ್ತದೆ, ಆದ್ದರಿಂದ ಮಹಿಳೆಯರಂತೆ ಪುರುಷರು ಸಹ ದಿನಕ್ಕೆ ಕನಿಷ್ಠ ಎರಡು ಬಾರಿ ತಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು.

ಮಾಯಿಶ್ಚರೈಸರ್ ಬಳಸಿ

ಚರ್ಮವನ್ನು ತೇವಾಂಶಯುಕ್ತ ಮತ್ತು ಮೃದುವಾಗಿಡಲು ಮಾಯಿಶ್ಚರೈಸರ್ ಹಚ್ಚುವುದು ಅವಶ್ಯಕ. ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾದ ಮಾಯಿಶ್ಚರೈಸರ್ ಬಳಸಬೇಕು.

ಸನ್‌ಸ್ಕ್ರೀನ್‌ ಬಳಸಿ

ಮಹಿಳೆಯರಂತೆಯೇ, ಪುರುಷರು ಸಹ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಲೇಬೇಕು. ಕನಿಷ್ಠ SPF 50 ಇರುವ ಸನ್‌ಸ್ಕ್ರೀನ್ ಹಚ್ಚಿದರೆ ಉತ್ತಮ.

ಟೋನರ್‌ ಬಳಕೆ

ಮಹಿಳೆಯರಂತೆ ಪುರುಷರು ಸಹ ತ್ವಚೆಗೆ ಟೋನರ್ ಹಚ್ಚಿಕೊಳ್ಳಬೇಕು. ಪುರುಷರ ಚರ್ಮ ಬಿಗಿಯಾಗಿ ಮತ್ತು ದಪ್ಪವಾಗಿರುವುದರಿಂದ ಟೋನರ್ ಹಚ್ಚುವುದು ಅಗತ್ಯ.

ಸ್ಕ್ರಬ್ ಮಾಡಿ

ಸ್ಕ್ರಬ್ಬಿಂಗ್ ಚರ್ಮದಲ್ಲಿ ಅಡಗಿರುವ ಕೊಳೆಯನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಸತ್ತ ಚರ್ಮದ ಕೋಶಗಳನ್ನು ಸಹ ತೆಗೆದುಹಾಕುತ್ತದೆ. ಹಾಗಾಗಿ15 ದಿನಗಳಿಗೊಮ್ಮೆ ಸ್ಕ್ರಬ್ಬಿಂಗ್‌ ಮಾಡಿ

ಶೇವಿಂಗ್‌ ಕ್ರೀಮ್‌ ಬಳಕೆ

ಶೇವಿಂಗ್ ಮಾಡಿದ ನಂತರ ಅಲೋವೆರಾ ಜೆಲ್ ಅಥವಾ ಯಾವುದಾದರೂ ಉತ್ತಮ ಕ್ರೀಮ್  ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಲು ಮರೆಯದಿರಿ.

ಧೂಮಪಾನ ಕಡಿಮೆ ಮಾಡಿ

ಧೂಮಪಾನವು  ಚರ್ಮಕ್ಕೆ ಹಾನಿ ಮಾಡುತ್ತದೆ. ಇದು ಚರ್ಮದಲ್ಲಿ ಸುಕ್ಕುಗಳನ್ನು ಉಂಟುಮಾಡುತ್ತದೆ. ಕಾಲಜನ್ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ.