ಮುಕೇಶ್‌ ಅಂಬಾನಿಯ ಯಶಸ್ಸಿನ ಪಾಠ

Pic Credit: pinterest

By Malashree Anchan

19 May 2025

ಮುಕೇಶ್‌ ಅಂಬಾನಿ

ಮುಕೇಶ್‌ ಅಂಬಾನಿ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ, ಖ್ಯಾತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ನ  ಮುಖ್ಯಸ್ಥರಾದ ಇವರು ಭಾರತ ಮಾತ್ರವಲ್ಲ ಏಷ್ಯಾದ ಶ್ರೀಮಂತ ವ್ಯಕ್ತಿ.

ಯಶಸ್ಸು

ಮುಕೇಶ್‌ ಅಂಬಾನಿಯವರ ಯಶಸ್ಸಿನ ಮಂತ್ರವನ್ನು ಫಾಲೋ ಮಾಡುವ ಮೂಲಕ ನೀವು ಕೂಡಾ ಸಾಧನೆಯ ಹಾದಿಯಲ್ಲಿ ಸಾಗಿ.

ಗುರಿಯತ್ತ ಗಮನ

ಸಮಸ್ಯೆ ಬಂತೆಂದು ಗುರಿಯಿಂದ ಹಿಂದೆ ಸರಿಯಬೇಡಿ. ನಿಮ್ಮ ಗಮನ ಯಾವಾಗಲೂ ಗುರಿಯ ಕಡೆಗಿರಲಿ.

ಸಕಾರಾತ್ಮಕ ಚಿಂತನೆ

ಸಕಾರಾತ್ಮಕ ಆಲೋಚನೆಯನ್ನು ಬೆಳೆಸಿಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸನ್ನು ಸಾಧಿಸುವತ್ತ ಹೆಜ್ಜೆಯಿಡಿ.

ಕಲಿಕೆ

 ನಿಮ್ಮ ಸುತ್ತಮುತ್ತಲಿನವರಿಂದ ಮತ್ತು ಅನುಭವಿ ವ್ಯಕ್ತಿಗಳಿಂದ  ಯಾವಾಗಲೂ ಹೊಸ ವಿಷಯಗಳನ್ನು ಕಲಿಯುತ್ತಿರಿ.

ಅಹಂಕಾರ

ಅಹಂಕಾರ ಪಡದೆ ಉದಾರ ಮನೋಭಾವದಿಂದ ವರ್ತಿಸಿ. ಈ ಗುಣ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುವುದು ನಿಜ.

ವೈಫಲ್ಯ

ಈ ವೈಫಲ್ಯಗಳಿಗೆ ಹೆದರದೆ ಮುನ್ನುಗ್ಗಿದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ಸಂಗಾತಿ

ಮದುವೆಯ ನಂತರ ವೃತ್ತಿಜೀವನದಲ್ಲಿ ಇನ್ನಷ್ಟು ಏಳಿಗೆಯನ್ನು ಬಯಸಿದರೆ ನಿಮಗೆ ಬೆಂಬಲವಾಗಿ ನಿಲ್ಲುವ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಮುಖ್ಯ.