Pic Credit: pinterest
By Malashree anchan
09 July 2025
ದಿನದ ಆರಂಭ ಚೆನ್ನಾಗಿದ್ದರೆ, ಆ ಇಡೀ ದಿನವೇ ಸಕಾರಾತ್ಮಕವಾಗಿ ಇರುತ್ತದೆ. ಅದಕ್ಕಾಗಿಯೇ ಬೆಳಗ್ಗೆ ಎದ್ದ ತಕ್ಷಣ ಈ ಒಂದಷ್ಟು ವಿಷಯಗಳನ್ನು ನೋಡಬೇಕಂತೆ.
ಬೆಳಗ್ಗೆ ಎದ್ದ ತಕ್ಷಣ ಅಂಗೈಗಳನ್ನು ನೋಡಬೇಕಂತೆ. ಎರಡು ಕರವನ್ನು ನೋಡುತ್ತಾ ಕರ ದರ್ಶನ ಮಂತ್ರವನ್ನು ಪಠಿಸುವುದರಿಂದ ದಿನ ಸಕಾರಾತ್ಮಕವಾಗಿ ಆರಂಭವಾಗುತ್ತದೆ.
ಬೆಳಗ್ಗೆ ಎದ್ದ ತಕ್ಷಣ ದೇವರ ವಿಗ್ರಹ ಅಥವಾ ಫೋಟೋವನ್ನು ನೋಡುವುದು ಕೂಡಾ ಒಳ್ಳೆಯದು. ಅಲ್ಲದೆ ಇದನ್ನು ಶುಭವೆಂದು ಸಹ ಪರಿಗಣಿಸಲಾಗಿದೆ.
ಬೆಳಗ್ಗೆ ಎದ್ದ ನಂತರ ಸೂರ್ಯನನ್ನು, ಸೂರ್ಯೋದಯವನ್ನು ನೋಡುವುದು ಕೂಡಾ ತುಂಬಾನೇ ಒಳ್ಳೆಯದು.
ಹಸುವನ್ನು ನೋಡುವುದರಿಂದ ಶುಭ ಫಲಿತಾಂಶ ದೊರೆಯುತ್ತದೆ. ಅದರಲ್ಲೂ ಬಿಳಿ ಬಣ್ಣದ ಹಸುವನ್ನು ನೋಡಿದರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.
ಬೆಳಗ್ಗೆ ಹೂವು ಬಿಡುವ ಸಸ್ಯಗಳು, ಹಸಿರು ಮರಗಳನ್ನು ನೋಡುವುದು ಕೂಡಾ ಒಳ್ಳೆಯದು. ಸಕಾರಾತ್ಮಕತೆಯ ಸಂಕೇತವಾಗಿರುವ ಮರ ಗಿಡಗಳು ಮನಸ್ಸಿಗೆ ಶಾಂತಿ ಒದಗಿಸುತ್ತದೆ.
ಶಾಸ್ತ್ರಗಳ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನೀರು ಮತ್ತು ಜಲಪಾತಗಳ ಚಿತ್ರಗಳನ್ನು ನೋಡುವುದು ಕೂಡ ತುಂಬಾನೇ ಒಳ್ಳೆಯದು. ಹೌದು ಇದರಿಂದ ಮಾನಸಿಕ ಶಾಂತಿ ದೊರೆಯುತ್ತದೆ.
ಬೆಳಗ್ಗೆ ನವಿಲು ಗರಿಯನ್ನು ನೋಡುವುದರಿಂದ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಜೊತೆಗೆ ಇದರಿಂದ ನಿಮ್ಮಲ್ಲಿ ದಿನಪೂರ್ತಿ ಸಕಾರಾತ್ಮಕ ಆಲೋಚನೆಗಳೇ ತುಂಬಿರುತ್ತಂತೆ.