Pic Credit: pinterest
By Malashree Anchan
29 May 2025
ಪ್ರೇಮಿಗಳು ತಮ್ಮ ಸಂಗಾತಿಗೆ ಕೆಲವೊಂದು ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದಂತೆ. ಇದರಿಂದ ಸಂಬಂಧವೇ ಹಾಳಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಕಳ್ಳಿ ಗಿಡಗಳಂತ ಮುಳ್ಳಿನ ಸಸ್ಯವನ್ನು ಗಿಫ್ಟ್ ಮಾಡ್ಬಾರ್ದು. ಈ ಸಸ್ಯಗಳು ನಕಾರಾತ್ಮಕ ಶಕ್ತಿಯನ್ನು ಹೊರಸೂಸುವ ಕಾರಣ ಇದು ಮನಸ್ತಾಪಕ್ಕೆ ಕಾರಣವಾಗಬಹುದು.
ಗಾಜಿನ ವಸ್ತುಗಳು ಬೇಗನೆ ಒಡೆದು ಹೋಗುತ್ತದೆ. ಅದೇ ರೀತಿ ಗಾಜಿನ ವಸ್ತುಗಳನ್ನು ಉಡುಗೊರೆ ನೀಡಿದರೆ ಸಂಬಂಧವೂ ಒಡೆದು ಹೋಗುತ್ತದೆ ಎಂದು ನಂಬಲಾಗಿದೆ.
ಸುಗಂಧ ದ್ರವ್ಯದ ವಾಸನೆ ಸ್ಪಲ್ಪ ಸಮಯದ ಬಳಿಕ ಮಾಯವಾಗುವಂತೆ, ಇದನ್ನು ಲವರ್‌ಗೆ ಉಡುಗೊರೆಯಾಗಿ ನೀಡಿದರೆ ನಿಮ್ಮ ಸಂಬಂಧ ಕೂಡಾ ಹಾಳಾಗಬಹುದು.
ಕಪ್ಪು ಬಣ್ಣವನ್ನು ನಕಾರಾತ್ಮಕತೆ, ದುಃಖದ ಸಂಕೇತವೆಂದು ಹೇಳಲಾಗುತ್ತದೆ. ಇದನ್ನು ಗಿಫ್ಟ್ ಮಾಡಿದ್ರೆ ಸಂಗಾತಿಗಳ ನಡುವೆ ತಪ್ಪು ತಿಳುವಳಿಕೆ, ಜಗಳ ಉಂಟಾಗಬಹುದು.
ರೇಜರ್‌ಗಳು, ಚಾಕುಗಳು ಮುಂತಾದ ಚೂಪಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಇದು ಸಂಗಾತಿಗಳ ನಡುವಿನ ಬಂಧವನ್ನೇ ಒಡೆದು ಬ್ರೇಕಪ್‌ಗೆ ಕಾರಣವಾಗಬಹುದು.
ನಿಮ್ಮ ಸಂಗಾತಿಗೆ ಗಡಿಯಾರ ಅಥವಾ ವಾಚ್ ಉಡುಗೊರೆಯಾಗಿ ನೀಡುವುದರಿಂದ ಕೆಲವೊಂದು ಬಾರಿ ಸಮಯವೇ ನಿಂತಂತೆ ಸಂಬಂಧವೂ ಅಂತ್ಯ ಕಾಣಬಹುದು.
ಸಂಗಾತಿಗೆ ಶೂಗಳನ್ನು ಉಡುಗೊರೆಯಾಗಿ ನೀಡಬಾರದಂತೆ. ಇದರಿಂದ ಬ್ರೇಕಪ್ ಆಗುವ ಸಾಧ್ಯತೆ ಇರುತ್ತಂತೆ.