ಯಾವುದೇ ಕಾರಣಕ್ಕೂ ಸ್ಟೀಲ್‌ ಪಾತ್ರೆಯಲ್ಲಿ ಈ ಆಹಾರಗಳನ್ನು ಸ್ಟೋರ್‌ ಮಾಡ್ಬೇಡಿ

Pic Credit: pinterest

By Malashree anchan

11 July 2025

ಉಪ್ಪಿನಕಾಯಿ

ಸ್ಟೀಲ್‌ ಪಾತ್ರೆಯಿಲ್ಲಿ ಉಪ್ಪಿನಕಾಯಿ ಸ್ಟೋರ್‌ ಮಾಡಿದರೆ ಅದು ಬೇಗ ಕೆಡಬಹುದು, ಅದರ ರುಚಿ ಕೂಡ ಹಾಳಾಗಬಹುದು. ಹಾಗಾಗಿ ಗಾಜು, ಪಿಂಗಾಣಿ ಜಾಡಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.

ಮೊಸರು 

ಮೊಸರು ನೈಸರ್ಗಿಕವಾಗಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಇದನ್ನು ದೀರ್ಘ ಗಂಟೆಗಳ ಕಾಲ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಇದರ ರುಚಿ ಕೆಡುವ ಸಾಧ್ಯತೆ ಇರುತ್ತದೆ.

ನಿಂಬೆ ಮಿಶ್ರಿತ ಆಹಾರಗಳು

ರುಚಿ ಕೆಡುವುದರ ಜೊತೆಗೆ ಇವುಗಳ ಆಮ್ಲೀಯತ ಪಾತ್ರೆಯ ಕರಗುವಿಕೆಗೂ ಕಾರಣವಾಗುವ ಕಾರಣ ನಿಂಬೆ ಮಿಶ್ರಿತ ಆಹಾರಗಳನ್ನು ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು.

ಟೊಮೆಟೊ ಮಿಶ್ರಿತ ಭಕ್ಷ್ಯಗಳು

ಟೊಮೆಟೊ ಅಥವಾ ಟೊಮೆಟೊ ಮಿಶ್ರಿತ ಭಕ್ಷ್ಯಗಳನ್ನು ಗಿರಬಹುದು ಇವುಗಳನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ.

ಹಣ್ಣುಗಳು ಮತ್ತು ಸಲಾಡ್‌ಗಳು

ಹಣ್ಣಿನಲ್ಲಿರುವ ನೀರಿನ ಅಂಶ ಹೊರ ಬರಬರುವ ಹಾಗೂ ಹಣ್ಣಿನ ರುಚಿ ಕೆಡುವ ಕಾರಣದಿಂದ ಇವುಗಳನ್ನು ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ.

ಉಪ್ಪು

ಉಪ್ಪನ್ನು ಸ್ಟೀಲ್‌ ಪಾತ್ರೆಯಲ್ಲಿ ದೀರ್ಘಕಾಲ ಸಂಗ್ರಹಿಸುವುದರಿಂದ ಉಪ್ಪಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ.

ವಿನೆಗರ್‌

ವಿನೆಗರ್‌ ಆಮ್ಲೀಯ ಪದಾರ್ಥವಾಗಿದ್ದು ಇದನ್ನು ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿದರೆ, ಅದರ ರುಚಿ ಹಾಳಾಗುವುದರ ಜೊತೆಗೆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ.

ಜೇನುತುಪ್ಪ

ಜೇನುತುಪ್ಪವನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ ಏಕೆಂದರೆ ಇದು ಜೇನುತುಪ್ಪದ ರುಚಿಯ ಮೇಲೆ ಪರಿಣಾಮ ಬೀರು ಸಾಧ್ಯತೆ ಇರುತ್ತದೆ.