ಪೋಷಕರು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಇವುಗಳನ್ನು ಹೇಳಿಕೊಡಬೇಕು

Pic Credit: pinterest

By Malashree anchan

07 July 2025

ಜೀವನಪಾಠ

ಶಿಕ್ಷಣ ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಈ ಕೆಲವೊಂದಷ್ಟು ವಿಷಯಗಳನ್ನು ಮಕ್ಕಳಿಗೆ 10 ವರ್ಷ ತುಂಬುವ ಮೊದಲೇ ಪೋಷಕರು ಕಲಿಸಬೇಕಂತೆ.

ಸಮಯ ನಿರ್ವಹಣೆ

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಮಯ ನಿರ್ವಹಣೆಯ ಬಗ್ಗೆ ಕಲಿಸಬೇಕು. ಇದು ಮಕ್ಕಳಿಗೆ ಜೀವನದಲ್ಲಿ ಸಮಯ ಪಾಲನೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.

ಎಲ್ಲರನ್ನೂ ಗೌರವಿಸುವುದು

ಹಿರಿಯರ ಜೊತೆ ಹೇಗೆ ಮಾತನಾಡಬೇಕು, ದಯೆಯಿಂದ ಹೇಗೆ ವರ್ತಿಸುವ ಬಗ್ಗೆ ಕಲಿಸಬೇಕು. ಇದು ಮಕ್ಕಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ.

ನಿರ್ಧಾರ ತೆಗೆದುಕೊಳ್ಳುವುದು

ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸರಿಯಾದ ನಿರ್ಧಾಗಳನ್ನು ತೆಗೆದುಕೊಳ್ಳುವುದು ಹೇಗೆ ಎಂದು ಕಲಿಸಿ. ಇದು ಅವರ ಆಲೋಚನಾ ಕೌಶಲ್ಯವನನು ಹೆಚ್ಚಿಸುತ್ತದೆ.

ಶಿಸ್ತು

ಬೆಳಗ್ಗೆ ಸಮಯಕ್ಕೆ ಸರಿಯಾಗಿ ಏಳುವುದು, ಬೆಡ್‌ಶೀಟ್‌ ಮಡಚುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ಇತ್ಯಾದಿ ಶಿಸ್ತಿನ ಪಾಠವನ್ನು ಪೋಷಕರು ಕಲಿಸಲೇಬೇಕು.

ನೈರ್ಮಲ್ಯ

ಕೈ ತೊಳೆಯದೆ ಊಟ ಮಾಡಬಾರದು, ಮನೆಗೆ ಬಂದ ನಂತರ ಕೈ ಕಾಲು ಮುಖ ತೊಳೆಯಬೇಕು ಹೀಗೆ ಒಂದಷ್ಟು ನೈರ್ಮಲ್ಯದ ಬಗ್ಗೆ ಪೋಷಕರು ಮಕ್ಕಳಿಗೆ ಕಲಿಸಿಕೊಡಬೇಕು.

ಹಣದ ಮಹತ್ವ

ಮಕ್ಕಳು ಹಠ ಮಾಡಿದರೆಂದು ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದಲ್ಲ, ಬದಲಿಗೆ ಹಣ ಎಷ್ಟು ಮುಖ್ಯ, ಹಣವನ್ನು ಏಕೆ ದುಂದು ವೆಚ್ಚ ಮಾಡಬಾರದು ಎಂದು ಪಾಠವನ್ನು ಕಲಿಸಿಕೊಡಬೇಕು.

ಗಿಡಗಳಿಗೆ ನೀರು ಹಾಕುವುದು

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಗಿಡಗಳಿಗೆ ನೀರು ಹಾಕುವ ಅಭ್ಯಾಸವನ್ನು ಹೇಳಿ ಕೊಡಿ. ಇದು ಮಕ್ಕಳಲ್ಲಿ ಪ್ರಕೃತಿ ಪ್ರೇಮವನ್ನು ಬೆಳೆಸಲು ಸಹಾಯ ಮಾಡುತ್ತದೆ.