ಪೋಷಕರು ಮಕ್ಕಳ ಮುಂದೆ ಹೀಗಿರಬಾರದು

Pic Credit: pinterest

By Malashree Anchan

21 May 2025

ಹೀಗೆ ಮಾಡಬೇಡಿ

ಮಕ್ಕಳು ದೊಡ್ಡವನ್ನು ನೋಡಿ ಬಹಳಷ್ಟು ಕಲಿಯುತ್ತಾರೆ ಎಂದು ಹೇಳ್ತಾರೆ. ಹೀರುವಾಗ ಪೋಷಕರು ಮಕ್ಕಳ ಮುಂದೆ ಈ ಎಲ್ಲಾ ಕೆಲಸಗಳನ್ನು ಮಾಡಲೇಬಾರದು.

ಕೆಟ್ಟ ಪದಗಳ ಬಳಕೆ

ಪೋಷಕರು ಆಗಿರಬಹುದು ಅಥವಾ ಮನೆಯಲ್ಲಿರುವ ಯಾರೇ ಆಗಿರಬಹುದು, ಎಂದಿಗೂ ಮಕ್ಕಳ ಮುಂದೆ ಕೆಟ್ಟ ಪದಗಳನ್ನು ಬಳಕೆ ಮಾಡಲೇಬಾರದು.

ಮೊಬೈಲ್‌ ನೋಡಬಾರದು

 ಮಕ್ಕಳೆದುರು ಪೋಷಕರು ಹೆಚ್ಚಾಗಿ ಮೊಬೈಲ್‌ ನೋಡುತ್ತಾ ಕೂರಬಾರದು. ಏಕೆಂದರೆ ಮಕ್ಕಳು ಇದೇ ಅಭ್ಯಾಸ ಕಲಿಯುತ್ತಾರೆ.

ಕೆಟ್ಟ ಅಭ್ಯಾಸ

ಮಕ್ಕಳ ಮುಂದೆ ಮದ್ಯ ಸೇವಿಸುವುದು, ಸಿಗರೇಟ್‌ ಸೇದುವುದು ಇತ್ಯಾದಿ ಕೆಟ್ಟ ಅಭ್ಯಾಸಗಳನ್ನು ಮಕ್ಕಳ ಮುಂದೆ ಮಾಡಬೇಡಿ.  

ಇತರರನ್ನು ಟೀಕಿಸುವುದು

ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು, ಅವರ ಬಗ್ಗೆ ಚಾಡಿ ಹೇಳುವುದನ್ನು ಮಕ್ಕಳ ಮುಂದೆ ಮಾಡಲು ಹೋಗಬೇಡಿ.

ಬೈಯುವುದು

ಪ್ರತಿ ಸಲ ಮಕ್ಕಳಿಗೆ ಬೈದ್ರೆ ಅಥವಾ ಅವರನ್ನು ನಿಂದಿಸಿದರೆ ಖಂಡಿತವಾಗಿಯೂ ಇದು ಮಕ್ಕಳ ಮನಸ್ಸನ್ನು ಘಾಸಿ ಮಾಡುತ್ತದೆ.

ಗೌರವ ಕೊಡದಿರುವುದು

ಇತರರಿಗೆ ಗೌರವ ಕೊಡದೆ ಮಾತನಾಡಿದರೆ, ನಿಮ್ಮ ಈ ಅಭ್ಯಾಸವನ್ನೇ ಮಕ್ಕಳು ಕೂಡಾ ಕಲಿಯುತ್ತಾರೆ.

ಜಗಳವಾಡುವುದು

ಪೋಷಕರು ಮಕ್ಕಳ ಮುಂದೆ ಯಾವುದೇ ಕಾರಣಕ್ಕೂ ಜಗಳವಾಡಬಾರದು. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.