Pic Credit: pinterest
By Malashree Anchan
27 May 2025
ಮಳೆಗಾಲ ಆರಂಭವಾಗಿದೆ. ಈ ಋತುವಿನಲ್ಲಿ ಮಳೆಯ ಜೊತೆಗೆ ಸೊಳ್ಳೆಗಳ ಕಾಟವೂ ಅಧಿಕವಾಗಿರುತ್ತದೆ.
ಸೊಳ್ಳೆಗಳಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಅಪಾಯಕಾರಿ ಕಾಯಿಲೆಗಳು ಹರಡುತ್ತವೆ. ಈ ಕೆಲವು ಗಿಡ ನೆಟ್ಟರೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಮನೆಯ ಸುತ್ತಲೂ ತುಳಸಿ ಗಿಡ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಸೊಳ್ಳೆಗಳು ಚೆಂಡು ಹೂವುಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ನಿಮ್ಮ ಮನೆಯ ಬಳಿ ಈ ಗಿಡಗಳನ್ನು ನೆಡುವುದರಿಂದ ಸೊಳ್ಳೆಗಳನ್ನು ಸುಲಭವಾಗಿ ತೊಡೆದು ಹಾಕಬಹುದು.
ರೋಸ್ಮರಿ ಸಸ್ಯಗಳನ್ನು ನೈಸರ್ಗಿಕ ಸೊಳ್ಳೆ ನಿವಾರಕಗಳೆಂದು ಪರಿಗಣಿಸಲಾಗಿದೆ. ಸೊಳ್ಳೆಗಳು ಈ ಗಿಡದ ಗಾಢವಾದ ವಾಸನೆಯನ್ನು ಇಷ್ಟಪಡುವುದಿಲ್ಲ.
ಲೆಮನ್ ಗ್ರಾಸ್ ಎಂಬ ಗಿಡಮೂಲಿಕಾ ಸಸ್ಯವು ಸಹ ಸೊಳ್ಳೆಗಳನ್ನು ದೂರವಿಡುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಪುದೀನಾ ಗಿಡಗಳನ್ನು ಮನೆಯಲ್ಲಿ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು.
ಲ್ಯಾವೆಂಡರ್ ಸಸ್ಯದ ಸುವಾಸನೆಯು ಸೊಳ್ಳೆಗಳನ್ನು ಓಡಿಸಲು ಸಹಕಾರಿಯಾಗಿದೆ. ಈ ಸಸ್ಯ ನೆಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.