11 Dec 2025

Pic credit - Pintrest

Author: Akshay Pallamjalu 

ಕಡಿಮೆ ನಿದ್ರೆ ಮಾಡಿದರೆ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

ನೀವು ಪ್ರತಿನಿತ್ಯ ಸಾಕಷ್ಟು ನಿದ್ರೆ ಪಡೆಯದಿದ್ದರೆ ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ  ನೀವು ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಿ.

ಮೆದುಳಿನ ಕಾರ್ಯ

Pic credit - Pintrest

ನಿದ್ರೆಯ ಕೊರತೆಯು ತ್ವಚೆಯ ಆರೋಗ್ಯದ ಮೇಲೆಯೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಚರ್ಮದ ಮೇಲೆ ಸುಕ್ಕುಗಳು, ಡಾರ್ಕ್‌ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ.

ತ್ವಚೆಯ ಸಮಸ್ಯೆ

Pic credit - Pintrest

ನಿದ್ರೆಯ ಕೊರತೆಯು ಪ್ರಾಥಮಿಕವಾಗಿ ಹಾರ್ಮೋನು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವು ಹೆಚ್ಚಾಗಿರುತ್ತದೆ,

ಹಾರ್ಮೋನ್ 

Pic credit - Pintrest

ನಿದ್ರೆಯ ಕೊರತೆಯಿಂದ ಒತ್ತಡ ಹೆಚ್ಚಾಗುವುದರ ಜೊತೆಗೆ ಇದು ಆತಂಕ, ಕಿರಿಕಿರಿ, ರಕ್ತದೊತ್ತಡ ಮತ್ತು ಹಸಿವಿನ ಮೇಲೂ ಪರಿಣಾಮ ಬೀರುತ್ತದೆ.

ಒತ್ತಡ ಹೆಚ್ಚಾಗುತ್ತದೆ

Pic credit - Pintrest

ಕಡಿಮೆ ನಿದ್ರೆ ಮಾಡುವುದರಿಂದ ದೇಹದ ಇನ್ಸುಲಿನ್ ಸಮತೋಲನವು ಏರುಪೇರಾಗುತ್ತದೆ, ಕಾಲಾನಂತರದಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಮಧುಮೇಹ

Pic credit - Pintrest

ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದರ ಪರಿಣಾಮವಾಗಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಕಾಡುತ್ತವೆ.

ರೋಗನಿರೋಧಕ ಶಕ್ತಿ

Pic credit - Pintrest

ನಿದ್ರೆ ಸರಿಯಾಗಿ ಆಗದಿದ್ದರೆ ಅದರ ಪರಿಣಾಮಗಳು ಮೆದುಳಿನ ಮೇಲೆ ತಕ್ಷಣವೇ ಗೋಚರಿಸುತ್ತದೆ. ಇದು ಸ್ಮರಣಶಕ್ತಿಯ ನಷ್ಟಕ್ಕೂ ಕಾರಣವಾಗಬಹುದು.

ಸ್ಮರಣಶಕ್ತಿಯ ನಷ್ಟ

Pic credit - Pintrest

ಕಡಿಮೆ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಪಾರ್ಶ್ವವಾಯು, ಬೊಜ್ಜು, ಮಧುಮೇಹ, ಖಿನ್ನತೆ, ಒತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ದೀರ್ಘಕಾಲೀನ ಕಾಯಿಲೆ

Pic credit - Pintrest