Pic Credit: pinterest
By Malashree Anchan
22 May 2025
ಸಾಮಾನ್ಯವಾಗಿ ವಿಚ್ಛೇದನವು ಸಂಬಂಧವನ್ನು ಶಾಶ್ವತವಾಗಿ ಮುರಿದು ಹಾಕುತ್ತದೆ. ಆದ್ರೆ ಇದೀಗ ಸಂಬಂಧವನ್ನು ಬಲಪಡಿಸುವ ಸ್ಲೀಪ್ ಡಿವೋರ್ಸ್ ಸಖತ್ ಟ್ರೆಂಡ್‌ನಲ್ಲಿದೆ.
ಸಂಬಂಧ ಹಾಳಾಗದಿರಲು ಹಾಗೂ ಉತ್ತಮ ನಿದ್ರೆಗಾಗಿ ಸಂಗಾತಿಗಳು ಬೇರೆ ಬೇರೆ ಕೋಣೆಗಳಲ್ಲಿ ಪ್ರತ್ಯೇಕವಾಗಿ ಮಲಗುವುದೇ ಸ್ಲೀಪ್ ಡಿವೋರ್ಸ್.
ಈ ಸ್ಲೀಪ್ ಡಿವೋರ್ಸ್ ಪ್ರವೃತ್ತಿಯಲ್ಲಿ ಗಂಡ-ಹೆಂಡತಿ ಬೇರೆ ಬೇರೆ ಮಲಗುತ್ತಾರೆ. ಇಲ್ಲಿ ಇವರು ದೈಹಿಕವಾಗಿ ಬೇರೆಬೇರೆಯಾಗಿದ್ದರೂ, ಭಾವನಾತ್ಮಕವಾಗಿ ಜೊತೆಯಾಗಿರುತ್ತಾರೆ.
ಗೊರಕೆ, ಮಧ್ಯೆ ಮಧ್ಯೆ ಎಚ್ಚರಗೊಂಡು ಲೈಟ್ ಆನ್ ಮಾಡುವುದು ನಿದ್ರೆಯಲ್ಲಿ ಹೊರಳಾಡಿದಾಗ ಸಂಗಾತಿಯ ನಿದ್ರೆಯು ಹಾಳಾಗುತ್ತದೆ.
ಹೀಗೆ ಯಾವುದೇ ಡಿಸ್ಟರ್ಬ್ ಇಲ್ಲದೆ ಉತ್ತಮ ಮತ್ತು ನೆಮ್ಮದಿಯ ನಿದ್ರೆಯನ್ನು ಪಡೆಯುವುದು ಸ್ಲೀಪ್ ಡಿವೋರ್ಸ್‌ನ ಮೂಲ ಉದ್ದೇಶವಾಗಿದೆ.
ಕಡಿಮೆ ನಿದ್ರೆಯು ಮನಸ್ಥಿತಿಯನ್ನು ಹದಗೆಡಿಸಿ ಸಂಗಾತಿಯೊಂದಿಗೆ ಜಗಳವಾಡುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ರಾತ್ರಿಯ ನಿದ್ರೆಯು ಆರೋಗ್ಯ ಹಾಗೂ ಸಂತೋಷ ಎರಡಕ್ಕೂ ತುಂಬಾನೇ ಮುಖ್ಯ ಆದ್ದರಿಂದ ಸಂಬಂಧದ ದೃಷ್ಟಿಯಿಂದ ಸ್ಲೀಪ್ ಡಿವೋರ್ಸ್ ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.
ಇದು ಉತ್ತಮ ನಿದ್ರೆಯನ್ನು ಪಡೆಯುವಂತೆ ಮಾಡುವ ಮೂಲಕ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಸಂಬಂಧದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.