Pic Credit: pinterest
By Malashree anchan
29 July 2025
ಒತ್ತಡವು ಮಾನಸಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ಇದು ನಿಮ್ಮ ಮುಖದ ಅಂದದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ.
ನಿದ್ರೆಯ ಕೊರತೆಯು ಚರ್ಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಮಹಿಳೆಯರಲ್ಲಿ ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ.
ಇತ್ತೀಚಿನ ಸಂಶೋಧನೆಗಳು ಕೋಪವು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗಬಹುದು ಎಂದು ಹೇಳಿವೆ. ಹಾಗಾಗಿ ಮಹಿಳೆಯರು ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡಬೇಕು.
ಸಂಸ್ಕರಿಸಿದ ಆಹಾರ, ಜಂಕ್‌ಫುಡ್‌ಗಳ ಅತಿಯಾಗಿ ಸೇವನೆಯ ಪರಿಣಾಮ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮಹಿಳೆಯರು ಬೇಗನೆ ವಯಸ್ಸಾದವರಂತೆ ಕಾಣಿಸುತ್ತಾರೆ.
ಅತಿಯಾದ ಧೂಮಪಾನ, ಮದ್ಯಪಾನ ಸೇವನೆಯು ಮಹಿಳೆಯರ ಚರ್ಮವನ್ನು ಒಣಗಿಸಿ ನಿರ್ಜೀವಗೊಳಿಸುತ್ತದೆ. ಇದರಿಂದ ಬೇಗನೆ ವಯಸ್ಸಾದವರಂತೆ ಕಾಣುತ್ತಾರೆ.
ಯೋಗ, ವಾಕಿಂಗ್, ವ್ಯಾಯಾಮಂದತಹ ದೈಹಿಕ ಚಟುವಟಿಕೆಗಳನ್ನು ಮಾಡದೆ, ಜಡತ್ವ ಜೀವನಶೈಲಿಯನ್ನು ಅಳವಡಿಸಿಕೊಂಡರೂ ನೀವು ವಯಸ್ಸಾದವರಂತೆ ಕಾಣಿಸುತ್ತೀರಿ.
ಸೂರ್ಯನ ಹಾನಿಕಾರಕ ಕಿರಣಗಳು ನಮ್ಮ ಚರ್ಮಕ್ಕೆ ಹಾನಿ ಮಾಡುತ್ತದೆ. ಹೀಗಿರುವಾಗ ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚಿಕೊಳ್ಳದಿದ್ದರೆ ಚರ್ಮ ಬೇಗನೆ ವಯಸ್ಸಾದಂತೆ ಕಾಣಿಸುತ್ತದೆ.
ಮನೆ, ಕುಟುಂಬವನ್ನು ನೋಡಿಕೊಳ್ಳುವ ಚಿಂತೆಯಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಬಗ್ಗೆ ಕಾಳಜಿಯೇ ವಹಿಸುವುದಿಲ್ಲ. ಇದು ಕೂಡಾ ಅವರು ಬೇಗನೆ ವಯಸ್ಸಾದಂತೆ ಕಾಣಿಸಲು ಕಾರಣ.