ಮನೆಯಲ್ಲಿ ಈ ಪಕ್ಷಿಗಳ ಫೋಟೋ ಇಟ್ಟರೆ ನಿಮ್ಮ ಅದೃಷ್ಟವೇ ಬದಲಾಗುತ್ತಂತೆ

Pic Credit: pinterest

By Malashree anchan

6 August 2025 

ನವಿಲಿನ ಫೋಟೋ

ನವಿಲಿನ ಫೋಟೋ ಮನೆಯಲ್ಲಿ ಇಡುವುದು ತುಂಬಾನೇ ಒಳ್ಳೆಯದು. ಇದು ಶುಭ, ಸಕಾರಾತ್ಮಕತೆಯ ಸಂಕೇತವಾಗಿದ್ದು, ಇದರಿಂದ ಮನೆಗೆ  ಅದೃಷ್ಟವೂ ಬರುತ್ತದೆ.

ಹಂಸದ ಚಿತ್ರ

ಹಂಸದ ಚಿತ್ರ ಅದೃಷ್ಟವನ್ನು ತರುವುದು ಮಾತ್ರವಲ್ಲದೆ, ಈ ಫೋಟೋವನ್ನು ಇಡುವುದರಿಂದ ನಕಾರಾತ್ಮಕತೆ ದೂರವಾಗಿ ಮನೆಯಲ್ಲಿ ಸಕಾರಾತ್ಮಕತೆ ಬರುತ್ತದೆ.

ನೀಲಕಂಠ ಹಕ್ಕಿಯ ಚಿತ್ರ

ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದ್ದರೆ ಮತ್ತು ಮನೆಯ ವಾತಾವರಣವು ಉದ್ವಿಗ್ನತೆಯಿಂದ ಕೂಡಿದ್ದರೆ, ನೀವು ಮನೆಯಲ್ಲಿ ನೀಲಕಂಠ ಹಕ್ಕಿಯ ಫೋಟೋವನ್ನು ಇಡಬಹುದು.  

ಲವ್‌ ಬರ್ಡ್ಸ್‌ ಚಿತ್ರ

ಸಮೃದ್ಧಿ ನೆಲೆಸಬೇಕೆಂದು ಬಯಸಿದರೆ ಲವ್‌ ಬರ್ಡ್ಸ್‌ ಫೋಟೋ  ಮನೆಯಲ್ಲಿ ಇಡಿ. ಇದು  ಸಂತೋಷ, ಸಮೃದ್ಧಿ ತರುವುದರ ಜೊತೆಗೆ ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

ಫೀನಿಕ್ಸ್‌ ಪಕ್ಷಿ ಚಿತ್ರ

ಯಶಸ್ಸಿನ ಸಂಕೇತವಾಗಿರುವ ಫೀನಿಕ್ಸ್ ಪಕ್ಷಿಯ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ  ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ.

ಪಾರಿವಾಳದ ಚಿತ್ರ

ಪ್ರೀತಿಯ ಸಂಕೇತವಾಗಿರುವ ಪಾರಿವಾಳದ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಸಂತೋಷ, ಶಾಂತಿ, ಸಂಪತ್ತು ಹೆಚ್ಚಾಗುತ್ತದೆ. ಕುಟುಂಬ ಸದಸ್ಯರ ನಡುವಿನ ಸಂಬಂಧ ಬಲಗೊಳ್ಳುತ್ತದೆ.

ಗಿಣಿ ಫೋಟೋ

ಗಿಣಿಯನ್ನು ಸಾಕುವಂತೆ ಇದರ ಫೋಟೋವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸಹ ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ.

ಗುಬ್ಬಚ್ಚಿ ಚಿತ್ರ

ಮನೆಯಲ್ಲಿ ಗುಬ್ಬಚ್ಚಿ ಫೋಟೋವನ್ನು ಇಡುವುದರಿಂದ ಕುಟುಂಬ ಸದಸ್ಯರ ನಡುವೆ ಏಕತೆ ಮತ್ತು ಸಂಬಂಧ ಎನ್ನುವಂತಹದ್ದು ಬಲಗೊಳ್ಳುತ್ತಂತೆ.