Pic Credit: pinterest
By Malashree Anchan
5 june 2025
ಪ್ರತಿಯೊಬ್ಬ ಸ್ನೇಹಿತನೂ ನಮ್ಮ ಹಿತೈಷಿಯಾಗಿರುವುದಿಲ್ಲ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಸ್ನೇಹ ಬಯಸುವವರೂ ಇದ್ದಾರೆ. ಹಾಗಾಗಿ ಕೆಲವರು ಸ್ನೇಹಿತರಿಂದ ದೂರವಿರಿ.
ನಮ್ಮ ಮುಂದೆ ನಮ್ಮನ್ನು ಹೊಗಲಿ ಹಾಗೂ ಬೆನ್ನ ಹಿಂದೆ ನಮ್ಮನ್ನು ಟೀಕಿಸುವ ಸ್ನೇಹಿತರು ವಿಷದಂತೆ. ಅಂತಹವರಿಂದ ಆದಷ್ಟು ದೂರವಿರುವುದು ಉತ್ತಮ.
ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬಾರದೆ, ತಪ್ಪಿಸಿಕೊಂಡು ಓಡಾಡುವ ಸ್ನೇಹಿತ ಒಳ್ಳೆಯವನಲ್ಲ. ಅಂತಹ ಸ್ನೇಹಿತ ಯಾವುದೇ ಸಮಯದಲ್ಲಿ ನಿಮಗೆ ಮೋಸ ಮಾಡಬಹುದು.
ಪದೇ ಪದೇ ನಿಮ್ಮ ಭಾವನೆಗಳಿಗೆ ಉದ್ದೇಶಪೂರ್ವಕವಾಗಿ ನೋವುಂಟುಮಾಡುವಂತಹ ಸ್ನೇಹಿತನಿಂದ ಆದಷ್ಟು ದೂರವಿರುವುದೇ ಉತ್ತಮ.
ತನ್ನ ಸ್ವಾರ್ಥಕ್ಕಾಗಿ ನಿಮ್ಮ ಸ್ನೇಹವನ್ನು ಬಯಸುವ ಅವಕಾಶವಾದಿ ಜನರ ಸ್ನೇಹವನ್ನು ಮಾಡಬೇಡಿ. ಅಂತಹವರು ನಿಮಗೆ ಎಂದಿಗೂ ಉಪಕಾರಿಯಾಗಿರಲಾರರು.
ಕೆಟ್ಟ ಚಟ, ಕೆಟ್ಟ ಅಭ್ಯಾಸಗಳಿಗೆ ಪ್ರೋತ್ಸಾಹ ನೀಡುವಂತಹ ಸ್ನೇಹಿತರಿಂದ ಆದಷ್ಟು ದೂರವಿರಿ. ಇಂತಹವರಿಂದ ನಿಮ್ಮ ಜೀವನವೇ ಹಾಳಾಗಬಹುದು.
ನಿಮ್ಮ ಖುಷಿ, ನಿಮ್ಮ ಸಾಧನೆಯನ್ನು ಕಂಡು ಅಸೂಯೆ ಪಡುವಂತಹ ಸ್ನೇಹಿತನಿಂದ ನೀವು ಆದಷ್ಟು ದೂರವಿರುವುದು ಉತ್ತಮ.
ನಿಮ್ಮ ಖುಷಿ, ನಿಮ್ಮ ಸಾಧನೆಯನ್ನು ಕಂಡು ಅಸೂಯೆ ಪಡುವಂತಹ ಸ್ನೇಹಿತನಿಂದ ನೀವು ಆದಷ್ಟು ದೂರವಿರುವುದು ಉತ್ತಮ.