Pic Credit: pinterest
By Malashree anchan
10 September 2025
ಪ್ರತಿಯೊಂದು ವಿಷಯಗಳ ಬಗ್ಗೆ ಸುಳ್ಳು ಹೇಳುವವರ ಜೊತೆ ಸ್ನೇಹ ಬೆಳೆಸಿಕೊಳ್ಳಬಾರದು ಈ ಜನರು ಯಾವಾಗಲೂ ತಮ್ಮ ಸ್ವಂತ ಲಾಭಕ್ಕಾಗಿ ನಿಮ್ಮ ಸ್ನೇಹ ಬಯಸುತ್ತಾರೆ.
ಯಾವಾಗಲೂ ತಮ್ಮ ಮಾತಿನಿಂದ ಹಿಂದೆ ಸರಿಯುವ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತು ಬದಲಾಯಿಸುತ್ತಾರೆ ಮತ್ತು ದ್ರೋಹ ಬಗೆಯುತ್ತಾರೆ.
ನಿಮ್ಮ ಒಳ್ಳೆಯದು, ಯಶಸ್ಸನ್ನು ನೋಡಿ ಅಸೂಯೆ ಪಡುವವರು ಮತ್ತು ಯಾವಾಗಲೂ ನಿಮ್ಮನ್ನು ಟೀಕಿಸುವಂತಹ ಜನರು ಯಾವತ್ತಿಗೂ ನಿಮ್ಮ ನಂಬಿಕೆಗೆ ಅರ್ಹರಲ್ಲ.
ನಿಮಗೆ ಎಂದಿಗೂ ಪ್ರಾಮುಖ್ಯತೆ ನೀಡದ, ನಿಮ್ಮನ್ನು, ನಿಮ್ಮತನವನ್ನು ಹಾಗೂ ನಿಮ್ಮ ಭಾವನೆಗಳನ್ನು ಗೌರವಿಸದ ಜನರೂ ನಿಮ್ಮ ನಂಬಿಕೆಗೆ ಅರ್ಹರಲ್ಲ.
ಸ್ವಾರ್ಥಿ ಜನರಿಂದ ದೂರವಿದ್ದಷ್ಟು ಒಳ್ಳೆಯದು. ಇಂತಹ ಸ್ವಾರ್ಥಿ ಜನರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ನಿಮ್ಮ ಭಾವನೆಗಳನ್ನು ಎಂದಿಗೂ ಗೌರವಿಸುವುದಿಲ್ಲ.
ನಿಮ್ಮ ಭಾವನೆಗಳ ಜೊತೆ ಆಟವಾಡುವವರು, ಭಾವನೆಗಳಿಗೆ ನೋವುಂಟು ಮಾಡುವ ಜನರಿಂದ ಸಾಧ್ಯವಾದಷ್ಟು ದೂರವಿರಿ.
ಎಲ್ಲದರಲ್ಲೂ ತಪ್ಪು ಹುಡುಕುವವರು, ಪ್ರತಿ ಹೆಜ್ಜೆಯಲ್ಲೂ ನಿಮಗೆ ಪ್ರೇರಣೆ ನೀಡದೆ ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರಿ.
ಪ್ರತಿಯೊಂದು ನಿರ್ಧಾರದಲ್ಲೂ ಹಸ್ತಕ್ಷೇಪ ಮಾಡುವ, ನಿಮ್ಮ ಆಲೋಚನೆಗಳು ಮತ್ತು ಆಯ್ಕೆಗಳನ್ನು ಪ್ರಶ್ನಿಸುವ ಸ್ನೇಹಿತರು ನಿಮ್ಮನ್ನು ಮುಂದುವರಿಯಲು ಬಿಡುವುದಿಲ್ಲ.