ಈ ಕಾರಣಕ್ಕೆ ಬೇಸಿಗೆಯಲ್ಲಿ ತಪ್ಪದೆ ಸನ್‌ಗ್ಲಾಸ್‌ ಧರಿಸಬೇಕಂತೆ

Pic Credit: gettyimages

By Malashree Anchan

01 May 2025

ಸ್ಟೈಲಿಶ್‌ ಲುಕ್‌ 

ಫ್ಯಾಶನ್‌ಗಾಗಿ, ಸ್ಟೈಲಿಶ್‌ ಲುಕ್‌ ನೀಡುತ್ತೇ ಎಂಬ ಕಾರಣಕ್ಕೆ ಹಲವರು  ಸನ್‌ಗ್ಲಾಸ್‌ ಧರಿಸುತ್ತಾರೆ. ಇದು ಮಾತ್ರವಲ್ಲದೆ ಇದರಿಂದ ಪ್ರಯೋಜನವೂ ಹಲವಿದೆ.

ರೆಟಿನಾ ಹಾನಿ

ಬೇಸಿಗೆಯಲ್ಲಿ ಶಾಖದ ತೀವ್ರತೆ ಹೆಚ್ಚಿರುವುದರಿಂದ ಇದು ಕಣ್ಣು ಒಣಗುವುದನ್ನು, ರೆಟಿನಾ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ.

ಯುವಿ ಕಿರಣ

ಸನ್‌ಗ್ಲಾಸ್‌ ಧರಿಸುವುದರಿಂದ ಯುವಿ ಕಿರಣಗಳಿಂದ ಉಂಟಾಗುವ ಪ್ರತಿಕೂಲ ಪರಿಣಾಮದಿಂದ ಕಣ್ಣುಗಳನ್ನು ರಕ್ಷಿಸಬಹುದು.

ಮೈಗ್ರೇನ್‌

ಸೂರ್ಯನ ತೀವ್ರ ಶಾಖದ ಪರಿಣಾಮ ಉಂಟಾಗುವ ಮೈಗ್ರೇನ್‌ ಮತ್ತು ತಲೆನೋವಿನ ಅಪಾಯವನ್ನು ಕಡಿಮೆ ಮಾಡಲು ಸನ್‌ಗ್ಲಾಸ್‌ ಧರಿಸಬೇಕು.

ಕಣ್ಣು ಮಂಜಾಗುತ್ತದೆ

ಬಿರು ಬಿಸಿಲಿಗೆ ಉಂಟಾಗುವ ಕಣ್ಣಿನ ಕಿರಿಕಿರಿ, ಕಣ್ಣು ಮಂಜಾಗುವಂತಹ ಸಮಸ್ಯೆಯಿಂದ ಮುಕ್ತಿ ಪಡೆಯಲು ಸನ್‌ಗ್ಲಾಸ್‌ ಧರಿಸಿ.

ಸೂಕ್ಷ್ಮ ಚರ್ಮ

ಸನ್‌ಗ್ಲಾಸ್‌ ಧರಿಸುವುದರಿಂದ  ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮವು ಹಾನಿಗೊಳಗಾಗುವುದನ್ನು ತಪ್ಪಿಸಬಹುದು.

ಧೂಳಿನಿಂದ ರಕ್ಷಿಸುತ್ತದೆ

ಸನ್‌ಗ್ಲಾಸ್‌ಗಳು ಕಣ್ಣುಗಳನ್ನು ಮಾಲಿನ್ಯ ಮತ್ತು ಧೂಳಿನಿಂದ ರಕ್ಷಿಸುತ್ತದೆ.

ಗುಣಮಟ್ಟದ ಸನ್‌ಗ್ಲಾಸ್‌

ನೀವು ಯುವಿ ವಿಕಿರಣಗಳಿಂದ ರಕ್ಷಣೆಯನ್ನು ಒದಗಿಸುವ ಉತ್ತಮ ಗುಣಮಟ್ಟದ ಸನ್‌ಗ್ಲಾಸ್‌ಗಳನ್ನೇ ಈ ಬೇಸಿಗೆಯಲ್ಲಿ ಧರಿಸಬೇಕು.