Pic Credit: pinterest
By Preeti Bhat
17 July 2025
ಪರಸ್ಪರ ನಂಬಿಕೆ ಇಲ್ಲದಿದ್ದಾಗ ಪ್ರೀತಿ ಹುಟ್ಟಿದ್ದಷ್ಟೇ ವೇಗವಾಗಿ ಸಂಬಂಧಗಳು ಕಡಿದು ಹೋಗುತ್ತದೆ. ಹಾಗಾದರೆ ಹುಡುಗಿಯರು ಬ್ರೇಕ್ ಅಪ್ ಬಳಿಕ ಏನು ಮಾಡುತ್ತಾರೆ ಗೊತ್ತಾ?
ಸಂಬಂಧ ಮುರಿದುಬಿದ್ದ ಬಳಿಕ ಸಂಗಾತಿಯನ್ನು ಮೊಬೈಲ್ ನಂಬರ್ನಿಂದ ಹಿಡಿದು, ಸಾಮಾಜಿಕ ಜಾಲತಾಣ ಹೀಗೆ ಎಲ್ಲಾ ಕಡೆ ಬ್ಲಾಕ್ ಮಾಡುತ್ತಾರೆ.
ಪ್ರೀಯಕರನ ಜತೆಗಿದ್ದ ಫೋಟೋಗಳನ್ನು ಡಿಲೀಟ್ ಮಾಡುತ್ತಾರೆ ಅಥವಾ ಅದನ್ನ ಹೈಡ್ ಮಾಡುತ್ತಾರೆ.
ತುಂಬಾ ಹುಡುಗಿಯರು ಸಂಬಂಧ ಮುರಿದು ಬೀಳಲು ಕಾರಣವೇನೆಂದು ತಲೆಕೆಡಿಸಿಕೊಳ್ಳುತ್ತಾರೆ.
ಹಾಗೆಯೇ ತನ್ನ ಸಂಗಾತಿ ಬೇರೆ ಹುಡುಗಿಯೊಂದಿಗೆ ಸಂಪರ್ಕದಲ್ಲಿ ಇದ್ದಾರಾ? ಇಲ್ವಾ? ತನ್ನ ಹುಡುಗ ನನ್ನ ನೆನಪಲ್ಲೇ ಇದ್ದಾನಾ ಎಂಬುದನ್ನು ನೋಡುತ್ತಾರೆ.
ತುಂಬಾ ಹುಡುಗಿಯರು ಆ ನೋವಿನಿಂದ ಹೊರಬರಲು ಅಥವಾ ಆ ನೆನಪುಗಳನ್ನು ಮರೆಯುವುದಕ್ಕೆ ಸಂತೋಷವಾಗಿರುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.
ಕೆಲವು ಹುಡುಗಿಯರು ನೋವು ಸಹಿಸಿಕೊಳ್ಳಲು ಸಾಧ್ಯವಿಲ್ಲದೆ ಖಿನ್ನತೆ ಅಥವಾ ಒತ್ತಡಕ್ಕೆ ಒಳಗಾಗುತ್ತಾರೆ.
ಕೆಲವು ಹುಡುಗಿಯರು ತಮ್ಮ ಸ್ನೇಹಿತರ ಜತೆ ಸಮಯ ಕಳೆಯಲು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ.