Pic Credit: pinterest
By Malashree Anchan
9 june 2025
ಹೆಚ್ಚಿನ ಜನರು ಸ್ಟೈಲ್ ಮತ್ತು ಫ್ಯಾಷನ್‌ಗಾಗಿ ಬೆಳ್ಳಿ ಸರವನ್ನು ಧರಿಸುತ್ತಾರೆ. ಫ್ಯಾಷನ್ ಮಾತ್ರವಲ್ಲ ಇದನ್ನು ಧರಿಸುವುದರಿಂದ ಹಲವು ಪ್ರಯೋಜನಗಳು ಕೂಡಾ ಲಭಿಸುತ್ತವೆ.
ಶಾಸ್ತ್ರಗಳಲ್ಲಿ ಬೆಳ್ಳಿಯನ್ನು ಚಂದ್ರನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುವಲ್ಲಿ ಸಹಕಾರಿಯಾಗಿದೆ.
ಪ್ರತಿದಿನ ಕೊರಳಿಗೆ ಬೆಳ್ಳಿಯ ಸರ ಧರಿಸುವುದರಿಂದ ಮನಸ್ಸು ಶಾಂತವಾಗಿರುತ್ತದೆ ಮತ್ತು ಒತ್ತಡ, ಆತಂಕ ಕಡಿಮೆಯಾಗುತ್ತದೆ.
ಬೆಳ್ಳಿ ಸರವನ್ನು ಧರಿಸುವುದರಿಂದ ನಿಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿ ದೂರ ಮಾಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳ್ಳಿ ಸರ ಧರಿಸುವುದರಿಂದ ಆರೋಗ್ಯ ಪ್ರಯೋಜನಗಳೂ ಸಿಗುತ್ತವೆ. ಹೌದು ಇದು ದೇಹದ ಉಷ್ಣತೆಯನ್ನು ಸಾಮಾನ್ಯವಾಗಿಡಲು ಸಹಾಯ ಮಾಡುತ್ತದೆ.
ಬೆಳ್ಳಿಯ ಸರವನ್ನು ಕೊರಳಿಗೆ ಧರಿಸುವುದರಿಂದ ಜೀರ್ಣಕ್ರಿಯೆ ಹಾಗೂ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಂಬಿಕೆಗಳ ಪ್ರಕಾರ ಬೆಳ್ಳಿ ಸರವನ್ನು ಕೊರಳಿಗೆ ಧರಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಬೆಳ್ಳಿ ಸರವನ್ನು ಧರಿಸುವುದರಿಂದ ಆಧ್ಯಾತ್ಮಿಕ ಶಕ್ತಿ ಕೂಡಾ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.